ಮೈಸೂರು: ‘ರಾಜಕಾರಣದಲ್ಲಿ ಯಾವುದೂ ನಿಂತ ನೀರಲ್ಲ. ಕರ್ನಾಟಕದ ಆಡಳಿತ ಪಕ್ಷದಲ್ಲಿ ಏಕನಾಥ ಶಿಂದೆ ಯಾರೆಂಬುದು ಸದ್ಯದಲ್ಲೇ ಗೊತ್ತಾಗಲಿದೆ’ ಎಂದು ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಹೇಳಿದರು.
ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ವೀರೇಂದ್ರ ಪಾಟೀಲ, ಡಿ.ದೇವರಾಜ ಅರಸು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದನ್ನು ನೋಡಿದ್ದೇವೆ. ಮಹಾರಾಷ್ಟ್ರದಲ್ಲಿ ಕಂಡ ಕ್ಷಿಪ್ರ ರಾಜಕಾರಣವನ್ನೂ ರಾಜ್ಯದಲ್ಲೂ ನೋಡಲಿದ್ದೇವೆ’ ಎಂದರು.
‘ರಾಜ್ಯದ ಏಕನಾಥ ಶಿಂದೆಗೆ ಬೆಂಬಲ ನೀಡುವ ವಿಚಾರವನ್ನು ಬಿಜೆಪಿ ಹೈಕಮಾಂಡ್ ತೀರ್ಮಾನಿಸಲಿದೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.