ಮೈಸೂರು: ಆತಿಥೇಯ ಹರಿ ವಿದ್ಯಾಲಯ ಹಾಗೂ ಈಶ್ವರ್ ವಿದ್ಯಾಲಯ ತಂಡಗಳು ರೋಹಿತ್ ಸ್ಮರಣಾರ್ಥ ಸಿಬಿಎಸ್ಸಿ, ಐಸಿಎಸ್ಸಿ ಅಂತರ ಶಾಲಾ ಕೊಕ್ಕೊ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದ ಅಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡವು.
ಬಾಲಕರ ವಿಭಾಗದಲ್ಲಿ ಈಶ್ವರ್ ವಿದ್ಯಾಲಯ ತಂಡ ದ್ವಿತೀಯ ಹಾಗೂ ಈಸ್ಟ್ ವೆಸ್ಟ್ ಇಂಟರ್‌ನ್ಯಾಷನಲ್ ಶಾಲೆ ತಂಡವು ತೃತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಶಿಷ್ಕರಣಿ ಶಾಲೆ ದ್ವಿತೀಯ ಮತ್ತು ಹರಿ ವಿದ್ಯಾಲಯ ತೃತೀಯ ಬಹುಮಾನ ಪಡೆಯಿತು.
ಕರ್ನಾಟಕ ರಾಜ್ಯ ಹವ್ಯಾಸಿ ಕೊಕ್ಕೊ ಸಂಸ್ಥೆ ಕಾರ್ಯದರ್ಶಿ ಚಿನ್ನಮೂರ್ತಿ ಟೂರ್ನಿಗೆ ಚಾಲನೆ ನೀಡಿದರು. ಮೊದಲ ಬಾರಿಗೆ ಮ್ಯಾಟ್ ಅಂಕಣದಲ್ಲಿ ಕೊಕ್ಕೊ ಪಂದ್ಯಗಳನ್ನು ಆಡಿಸುತ್ತಿರುವುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಹರಿ ವಿದ್ಯಾಲಯದ ಕಾರ್ಯದರ್ಶಿ ಶ್ರೀನಿವಾಸ್ ಹೊಸಮನೆ, ಪ್ರಾಂಶುಪಾಲ ಎನ್ .ಭಾರತೀ ಶಂಕರ್, 21 ಶಾಲೆ ತಂಡಗಳ ಸ್ಪರ್ಧಿಗಳು ಹಾಗೂ ತರಬೇತುದಾರರು ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.