ADVERTISEMENT

ಕ್ಯಾತನಹಳ್ಳಿ‌: ಆರೋಗ್ಯ ಉಚಿತ ತಪಾಸಣೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 15:30 IST
Last Updated 20 ಜೂನ್ 2025, 15:30 IST
ಹಂಪಾಪುರ ಹೋಬಳಿಯ ಕ್ಯಾತನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಯಿತು 
ಹಂಪಾಪುರ ಹೋಬಳಿಯ ಕ್ಯಾತನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಯಿತು    

ಹಂಪಾಪುರ: ಮೈಸೂರಿನ ಹಾರ್ಟ್ ಸಂಸ್ಥೆ, ರೋಟರಿ ಕ್ಲಬ್, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ, ನಾರಾಯಣ ಹೆಲ್ತ್, ಎಎಸ್‌ಜಿ ಕಣ್ಣಿನ ಆಸ್ಪತ್ರೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಕ್ಯಾತನಹಳ್ಳಿ‌ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ ನಡೆಯಿತು.

ತಹಶೀಲ್ದಾರ್ ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ‌, ‘ಗ್ರಾಮೀಣ ಪ್ರದೇಶದಲ್ಲಿ ಇಂತಹ ಆರೋಗ್ಯ ಶಿಬಿರಗಳು ಅವಶ್ಯಕ’ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಮಾತನಾಡಿ, ‘ಶಿಬಿರದ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ಶಿಬಿರದಲ್ಲಿ 45 ಜನ ಕಣ್ಣಿನ ಪರೀಕ್ಷೆ, 20 ಜನ ಶ್ವಾಸಕೋಶ ಪರೀಕ್ಷೆ, 25 ಮಂದಿ ಇ.ಸಿ.ಜಿ, 75 ಜನ ರಕ್ತದೊತ್ತಡ ಮತ್ತು ಮಧುಮೇಹ, 75 ಜನ ಸಾಮಾನ್ಯ ರೋಗ ತಪಾಸಣೆ ಮಾಡಿಸಿಕೊಂಡರು.

ನಾರಾಯಣ ಹೆಲ್ತ್‌ನ ವಿನಯ್, ಎಎಸ್‌ಜಿ ಕಣ್ಣಿನ ಆಸ್ಪತ್ರೆಯ ಮಹೇಶ್, ಹಾರ್ಟ್ ಸಂಸ್ಥೆಯ ಸಂಯೋಜಕ ಶಿವಲಿಂಗ, ಸಿಪ್ಲ ಬ್ರಿತ್ ಫ್ರೀ ಸಮಿರ್, ಕ್ಯಾತನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪ್ರಶಾಂತ್, ಶೀಲಾ, ಸಮುದಾಯ ಆರೋಗ್ಯ ಅಧಿಕಾರಿ ಆಶಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.