ADVERTISEMENT

‘ಚೀನಾದ ಚಿತ್ರಹಿಂಸೆ ಕೊನೆಯಾಗಲಿ’

ಟಿಬೆಟನ್‌ ಸಂಘಟನೆ ಕಾರ್ಯಕರ್ತರ ಒತ್ತಾಯ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 15:46 IST
Last Updated 9 ಮಾರ್ಚ್ 2024, 15:46 IST
‘ಚೀನಾವು ಟಿಬೆಟನ್ನರಿಗೆ ಕಿರುಕುಳ ನೀಡಿ, ಕೊಲೆ ಮಾಡುವುದನ್ನು ನಿಲ್ಲಿಸಲಿ’ ಎಂದು ಒತ್ತಾಯಿಸಿ ಟಿಬೆಟನ್‌ ಯುವ ಕಾಂಗ್ರೆಸ್‌ ಹಾಗೂ ಪ್ರಾಂತೀಯ ಟಿಬೆಟನ್‌ ಮಹಿಳಾ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶನಿವಾರ ಪ್ರತಿಭಟಿಸಿದರು
‘ಚೀನಾವು ಟಿಬೆಟನ್ನರಿಗೆ ಕಿರುಕುಳ ನೀಡಿ, ಕೊಲೆ ಮಾಡುವುದನ್ನು ನಿಲ್ಲಿಸಲಿ’ ಎಂದು ಒತ್ತಾಯಿಸಿ ಟಿಬೆಟನ್‌ ಯುವ ಕಾಂಗ್ರೆಸ್‌ ಹಾಗೂ ಪ್ರಾಂತೀಯ ಟಿಬೆಟನ್‌ ಮಹಿಳಾ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶನಿವಾರ ಪ್ರತಿಭಟಿಸಿದರು   

ಮೈಸೂರು: ‘ಚೀನಾವು ಟಿಬೆಟನ್ನರಿಗೆ ಕಿರುಕುಳ ನೀಡಿ, ಕೊಲೆ ಮಾಡುವುದನ್ನು ನಿಲ್ಲಿಸಲಿ’ ಎಂದು ಒತ್ತಾಯಿಸಿ ಟಿಬೆಟನ್‌ ಯುವ ಕಾಂಗ್ರೆಸ್‌ ಹಾಗೂ ಪ್ರಾಂತೀಯ ಟಿಬೆಟನ್‌ ಮಹಿಳಾ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶನಿವಾರ ಪ್ರತಿಭಟಿಸಿದರು.

65ನೇ ನ್ಯಾಷನಲ್‌ ಅಪ್ರೈಸಿಂಗ್ ದಿನದ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ ಚೀನಾ ಸರ್ಕಾರದ ಕಠಿಣ ನಿರ್ಧಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಕೂಗಿದರು.

‘ಚೀನಾದ ಆಡಳಿತದಲ್ಲಿ ತಮ್ಮದೇ ನೆಲದಲ್ಲಿ ಟಿಬೆಟನ್ನರು ಸಹಿಸಲಾರದ ನೋವು ಅನುಭವಿಸುತ್ತಿದ್ದಾರೆ. ಚೀನಿಯರ ದಬ್ಬಾಳಿಕೆ, ಚಿತ್ರಹಿಂಸೆ, ಮಾನಸಿಕ ಕಿರುಕುಳದಿಂದಾಗಿ 12 ಲಕ್ಷ ಟಿಬೆಟನ್ನರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರು ಟಿಬೆಟಿಯನ್‌ ಭಾಷೆ, ಸಂಸ್ಕೃತಿ, ಧರ್ಮ ಹಾಗೂ ಗುರುತನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ದಲೈಲಾಮಾ ಅವರು ಟಿಬೆಟ್‌ ಸಮಸ್ಯೆಗೆ ಪರಿಹಾರ ಸೂತ್ರ ಸೂಚಿಸಿದ್ದು, ವಿಶ್ವಸಂಸ್ಥೆ ಮಧ್ಯಪ್ರವೇಶಿಸಿ ಚೀನಾದ ಆಕ್ರಮಣದಿಂದ ಟಿಬೆಟನ್ನರನ್ನು ರಕ್ಷಿಸಬೇಕು. ಡಿಜೆ ವ್ಯಾಗೋ ಗ್ರಾಮದ ಡ್ರಿಜು ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಹೊರಟಿರುವ ನಿರ್ಧಾರವನ್ನು ವಾಪಸ್‌ ಪಡೆಯಬೇಕು. ಅಲ್ಲಿಂದ ಟಿಬೆಟನ್ನರ ಸ್ಥಳಾಂತರ ಮಾಡಬಾರದು’ ಎಂದು ಒತ್ತಾಯಿಸಿದರು.

‘ಚೀನಾವು ಕೇಂದ್ರೀಯ ಟಿಬೆಟನ್‌ ಆಡಳಿತದೊಂದಿಗೆ ಮಾತುಕತೆಗೆ ಮುಂದಾಗಬೇಕು. ಟಿಬೆಟ್ ಧರ್ಮಗುರು 11ನೇ ಪಂಚೆನ್ ಲಾಮಾ ಗೆಂಡುನ್ ಚೋಯ್ಕಿ ಹಾಗೂ ತಂಡದವರನ್ನು ಬಿಡುಗಡೆಗೊಳಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.