ADVERTISEMENT

ಮೈಸೂರು | ಲಯನ್ಸ್‌ ಪ್ರಾಂತೀಯ ಸಮ್ಮೇಳನ ಜ.4ರಂದು: ಹೊನ್ನರಾಜು

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 12:38 IST
Last Updated 2 ಜನವರಿ 2026, 12:38 IST
   

ಮೈಸೂರು: ‘ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ– 317-ಜಿ ಪ್ರಾಂತೀಯ ಸಮ್ಮೇಳನವನ್ನು ಜ.4ರಂದು ಬೆಳಿಗ್ಗೆ 9ಕ್ಕೆ ವಿಶ್ವೇಶ್ವರ ನಗರದ ಭಾರತೀಯ ಬಿಲ್ಡರ್‌ಗಳ ಸಂಘದ ಎಂಬಿಸಿಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಾಂತೀಯ ಅಧ್ಯಕ್ಷ ಪಿ. ಹೊನ್ನರಾಜು ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಂಗಕರ್ಮಿ ಎಚ್. ಜನಾರ್ಧನ್ (ಜನ್ನಿ) ‘ಮಾನವೀಯತೆ ಮೊದಲ ಆದ್ಯತೆ’ ವಿಷಯ ಕುರಿತು ಮಾತನಾಡುವರು. ಡಾ.ಎನ್. ಕೃಷ್ಣಗೌಡ ಅತಿಥಿಗಳಾಗಿ ಪಾಲ್ಗೊಳ್ಳುವರು’ ಎಂದರು.

‘₹ 1.75 ಲಕ್ಷ ಮೊತ್ತದ 35 ಕೃತಕ ಕಾಲು ವಿತರಿಸಲಾಗುವುದು, ಸಂತೆಸರಗೂರಿನ ಶಾಲಾ ಕಟ್ಟಡ ಅಭಿವೃದ್ಧಿಗೆ ₹ 50ಸಾವಿರ ಚೆಕ್‌ ಹಾಗೂ ಮಹಿಳೆಯೊಬ್ಬರ ನೆರವಿಗೆ ಹೊಲಿಗೆ ಯಂತ್ರ ವಿತರಿಸಲಾಗುವುದು. ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಎಂ. ಪಂಚಲಿಂಗೇಗೌಡ, ವೀಣಾ ಅಶೋಕ್, ಎಚ್.ಖುಷಿ, ಕೆ.ಪಿ. ಶಿವಪ್ರಸಾದ್ ಹಾಗೂ ಜೈಪ್ರಕಾಶ್ ಅವರಿಗೆ ಪ್ರದಾನ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

ಕ್ಲಬ್‌ನ ಎಂ.ಎನ್. ಜೈಪ್ರಕಾಶ್, ಎಂ.ವಿ. ನಂದೀಶ್, ಸಿ. ಶಂಕರ್, ಜೆ.ಲೋಕೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.