ADVERTISEMENT

ಮಹಾರಾಜ ಟ್ರೋಫಿಗೆ ತೆರೆ: ಕೊನೇ ದಿನ ವರುಣ ಸಿಂಚನ; ಮಳೆಯಲ್ಲೇ ಆಟಗಾರರ ನೃತ್ಯ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 2:37 IST
Last Updated 29 ಆಗಸ್ಟ್ 2025, 2:37 IST
<div class="paragraphs"><p>ಮಹಾರಾಜ ಟ್ರೋಫಿ ಫೈನಲ್‌ ಗೆಲುವು ಘೋಷಣೆ ಆಗುತ್ತಿದ್ದಂತೆ ಮಂಗಳೂರು ಡ್ರ್ಯಾಗನ್ಸ್ ಆಟಗಾರರು ಮಳೆಯಲ್ಲೇ ಸಂಭ್ರಮಿಸಿದ ಪರಿ</p></div>

ಮಹಾರಾಜ ಟ್ರೋಫಿ ಫೈನಲ್‌ ಗೆಲುವು ಘೋಷಣೆ ಆಗುತ್ತಿದ್ದಂತೆ ಮಂಗಳೂರು ಡ್ರ್ಯಾಗನ್ಸ್ ಆಟಗಾರರು ಮಳೆಯಲ್ಲೇ ಸಂಭ್ರಮಿಸಿದ ಪರಿ

   

–ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.

ಮೈಸೂರು: ವರುಣ ಸಿಂಚನದೊಡನೆ ಮಹಾರಾಜ ಟ್ರೋಫಿ ಟ್ವೆಂಟಿ20 ಕ್ರಿಕೆಟ್ ಟೂರ್ನಿಗೆ ಗುರುವಾರ ತೆರೆ ಬಿದ್ದಿತು.

ADVERTISEMENT

2022ರಲ್ಲಿ ಕೆಪಿಎಲ್‌ ಬದಲಿಗೆ ಮಹಾರಾಜ ಟ್ರೋಫಿ ಟೂರ್ನಿಗೆ ಚಾಲನೆ ದೊರೆತಿದ್ದು, ಮೊದಲ ಆವೃತ್ತಿಯ ಆರಂಭಿಕ ಪಂದ್ಯಗಳು ಇದೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆದದ್ದು ವಿಶೇಷ. ಈ ಬಾರಿ ಅಚಾನಕ್ಕಾಗಿ ಒದಗಿ ಬಂದ ಅವಕಾಶವನ್ನು ಕೆಎಸ್‌ಸಿಎ ಮೈಸೂರು ವಲಯ ಬಳಸಿಕೊಂಡಿದ್ದು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಆ. 11ರಿಂದ 28ರವರೆಗೆ ಪಂದ್ಯಗಳು ನಡೆದವು. ಆದರೆ ಸದಾ ಆಟಗಾರರನ್ನು ಹುರಿದುಂಬಿಸುತ್ತಿದ್ದ ಪ್ರೇಕ್ಷಕರಿಗೆ ಈ ಬಾರಿ ಟೂರ್ನಿ ವೀಕ್ಷಣೆಗೆ ಅವಕಾಶ ಸಿಗದೇ ಹೋಯಿತು.

34 ಪಂದ್ಯ

ಲೀಗ್‌ ಹಂತದಲ್ಲಿ 30 ಸೇರಿದಂತೆ ಒಟ್ಟು 33 ಪಂದ್ಯಗಳು ಟೂರ್ನಿಯಲ್ಲಿ ನಡೆದವು. ಎಲ್ಲದ್ದಕ್ಕೂ ಒಂದೇ ಕ್ರೀಡಾಂಗಣ ಆತಿಥ್ಯ ವಹಿಸಿತು. ಸಾಕಷ್ಟು ಆಟಗಾರರ ಅಬ್ಬರದ ಆಟಕ್ಕೂ ಸಾಕ್ಷಿ ಆಯಿತು.

ಹುಬ್ಬಳ್ಳಿ ಟೈಗರ್ಸ್‌, ಬೆಂಗಳೂರು ಬ್ಲಾಸ್ಟರ್ಸ್‌, ಮಂಗಳೂರು ಡ್ರ್ಯಾಗನ್ಸ್‌, ಗುಲ್ಬರ್ಗ ಮಿಸ್ಟಿಕ್ಸ್‌ ತಂಡಗಳು ಪ್ಲೇ ಆಫ್‌ ಹಂತ ಪ್ರವೇಶಿಸಿದರೆ, ಸ್ಥಳೀಯ ಮೈಸೂರು ವಾರಿಯರ್ಸ್‌ ಹಾಗೂ ಶಿವಮೊಗ್ಗ ಲಯನ್ಸ್‌ ತಂಡಗಳ ಮಾತ್ರ ಲೀಗ ಹಂತದಲ್ಲಿಯೇ ಹೊರ ಬಿದ್ದು ನಿರಾಸೆ ಮೂಡಿಸಿದವು.

ಗುರುವಾರ ರಾತ್ರಿ ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿ ಆಗಿದ್ದು, ವಿಜೆಡಿ ನಿಯಮದಂತೆ ಮಂಗಳೂರು ಗೆದ್ದು ಪ್ರಶಸ್ತಿ ಎತ್ತಿ ಹಿಡಿಯಿತು. ಮಳೆಯಲ್ಲೇ ಆಟಗಾರರು ಕುಣಿದು ಕುಪ್ಪಳಿಸಿದರು.

ಟೂರ್ನಿಯಲ್ಲಿ ಸ್ಥಳೀಯ ಆಟಗಾರರು ಮಿಂಚುವ ಜತೆಗೆ ರಾಜ್ಯ ಹೊಸ ಪ್ರತಿಭೆಗಳ ಅನಾವರಣವೂ ಆಯಿತು. ಎಲೆಮರೆಯ ಕಾಯಿಯಂತೆ ಆಗಿದ್ದ ಹತ್ತಾರು ಸ್ಥಳೀಯ ಪ್ರತಿಭೆಗಳಿಗೆ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಕ್ರಿಕೆಟ್‌ ಉತ್ತಮ ವೇದಿಕೆ ಕಲ್ಪಿಸುವಲ್ಲಿ ಯಶಸ್ವಿಯಾಯಿತು.

ಮಹಾರಾಜ ಟ್ರೋಫಿ ಫೈನಲ್‌ನಲ್ಲಿ ಗೆಲುವು ಘೋಷಣೆ ಆಗುತ್ತಿದ್ದಂತೆ ಮಂಗಳೂರು ಡ್ರ್ಯಾಗನ್ಸ್ ಆಟಗಾರರು ಮಳೆಯಲ್ಲೇ ಸಂಭ್ರಮಿಸಿದ ಪರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.