ADVERTISEMENT

ಮೈಸೂರು: ಪುನರಾರಂಭಗೊಂಡ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 14:09 IST
Last Updated 29 ಜೂನ್ 2020, 14:09 IST
ನಾಲ್ಕು ದಿನಗಳಿಂದ ವ್ಯಾಪಾರ ಸ್ಥಗಿತಗೊಂಡಿದ್ದ ಮೈಸೂರಿನ ಸಂತೆಪೇಟೆಯಲ್ಲಿ ಸೋಮವಾರ ವಹಿವಾಟು ಪುನರಾರಂಭಗೊಂಡಿತು
ನಾಲ್ಕು ದಿನಗಳಿಂದ ವ್ಯಾಪಾರ ಸ್ಥಗಿತಗೊಂಡಿದ್ದ ಮೈಸೂರಿನ ಸಂತೆಪೇಟೆಯಲ್ಲಿ ಸೋಮವಾರ ವಹಿವಾಟು ಪುನರಾರಂಭಗೊಂಡಿತು   

ಮೈಸೂರು: ಕೊರೊನಾ ವೈರಸ್ ಸೋಂಕು ಹರಡುವಿಕೆಯ ಆತಂಕದಿಂದ ಕಳೆದ ಗುರುವಾರದಿಂದ ಸ್ಥಗಿತಗೊಂಡಿದ್ದ ನಗರದ ಕೆಲ ಪ್ರಮುಖ ಮಾರುಕಟ್ಟೆಗಳು ಸೋಮವಾರದಿಂದ ಪುನರಾರಂಭಗೊಂಡವು.

ದೇವರಾಜ ಮಾರುಕಟ್ಟೆ, ಸಂತೆ ಪೇಟೆ, ಶಿವರಾಂ ಪೇಟೆ, ಮನ್ನಾರ್ಸ್‌ ಮಾರುಕಟ್ಟೆ, ಬೋಟಿ ಬಜಾರ್‌ನಲ್ಲಿ ನಾಲ್ಕು ದಿನದ ಬಳಿಕ ಎಂದಿನಂತೆ ವ್ಯಾಪಾರ–ವಹಿವಾಟು ಶುರುವಾದವು.

ಈ ಮಾರುಕಟ್ಟೆಗಳು ಸಂಪೂರ್ಣ ಸ್ಥಗಿತಗೊಂಡಿದ್ದ ಸಮಯದಲ್ಲಿ ಪಾಲಿಕೆಯ ಆಡಳಿತ ಸ್ಯಾನಿಟೈಸ್‌ ಮಾಡುವ ಮೂಲಕ ಸೋಂಕು ಹರಡದಂತೆ ಸುರಕ್ಷತಾ ಕ್ರಮ ಕೈಗೊಂಡಿತ್ತು.

ADVERTISEMENT

ಇಲ್ಲಿಗೆ ಪ್ರವೇಶಿಸುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಸ್ಯಾನಿಟೈಸರ್ ಬಳಸುವ ಜತೆಗೆ ಕನಿಷ್ಠ ಅಂತರ ಕಾಪಾಡಿಕೊಳ್ಳಬೇಕು ಎಂದು ಪಾಲಿಕೆ ಆಡಳಿತ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.