ADVERTISEMENT

ಹಣ ನೀಡುವವರೆಗೂ ಚಿನ್ನ ನೀಡದಿರಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 20:12 IST
Last Updated 17 ಸೆಪ್ಟೆಂಬರ್ 2019, 20:12 IST

ಮೈಸೂರು: ಗಿರವಿ ಇಟ್ಟವರು ಅಥವಾ ಅವರ ಪರವಾಗಿ ಸರ್ಕಾರ ಹಣ ನೀಡುವವರೆಗೂ ಅಡವಿಟ್ಟುಕೊಂಡ ಚಿನ್ನಾಭರಣಗಳನ್ನು ವಾಪಸ್ ನೀಡದಿರಲು ಪಾನ್ ಬ್ರೋಕರ್ಸ್ ಮತ್ತು ಜ್ಯೂಯಲರ್ಸ್ ಆಸೋಸಿಯೇಷನ್ ನಿರ್ಧರಿಸಿದೆ.

ಮೈಸೂರಿನ ಮಹಾವೀರನಗರ (ಹಳ್ಳದಕೇರಿ)ದಲ್ಲಿರುವ ಕರ್ನಾಟಕ ಸೀರವಿ ಸಮಾಜದ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಋಣಮುಕ್ತ ಕಾಯ್ದೆಗೆ ಸಂಬಂಧಿಸಿದಂತೆ ಯಾವುದೇ ಒಡವೆಗಳನ್ನು ವಾಪಸ್ ನೀಡಲಾಗುವುದಿಲ್ಲ ಎಂದು ಅಂಗಡಿಗಳ ಮುಂದೆ ನಾಮಫಲಕಗಳನ್ನು ಅಳವಡಿಸಿಕೊಳ್ಳಲೂ ತೀರ್ಮಾನಿಸಲಾಯಿತು.

ADVERTISEMENT

ಸಭೆಯಲ್ಲಿ ಸಂಘದ ಕಾರ್ಯದರ್ಶಿ ಬವರಾವ್ ಕುಣಿಗಲ್, ಜಿಲ್ಲಾಧ್ಯಕ್ಷ ಬೆರರಾಮ್ ಸೋಲಂಕಿ, ದೀಪಕ್ ಜೈನ್, ಬಾಬುಲಾಲ್, ಹಿಮಾರಾಮ್, ಕೇಸರಿ ಮಲ್ ಮತ್ತಿತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.