ಮೈಸೂರು: ಇಲ್ಲಿನ ಚಾಮುಂಡಿಪುರಂನಬಸವ ಬಳಗದ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಸುತ್ತೂರು ಶಾಖಾ ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಗುರುವಾರ ಚಾಲನೆ ನೀಡಿದರು.
‘ಬಳಗದ ಸದಸ್ಯರು ಹತ್ತು ವರ್ಷಗಳಿಂದ ಬಸವೇಶ್ವರರ ಜಯಂತಿ, ರಾಮನವಮಿ, ಚಾಮುಂಡೇಶ್ವರಿ ಹಬ್ಬ ಮೊದಲಾದ ಕಾರ್ಯಕ್ರಮಗಳನ್ನು ಚಾಮುಂಡಿಪುರಂ ವೃತ್ತದಲ್ಲಿ ನಡೆಸುತ್ತಿದ್ದೇವೆ. ಸಮಾಜಮುಖಿ ಕೆಲಸಗಳಲ್ಲಿ ನಿರತವಾಗಿದ್ದೇವೆ. ಈಚೆಗೆ, ‘ಬಸವ ಬಳಗ ಚಾಮುಂಡಿಪುರಂ’ ಹೆಸರಿನಲ್ಲಿ ಸಂಘವನ್ನು ನೋಂದಣಿ ಮಾಡಿಸಿದ್ದೇವೆ. ಇದಕ್ಕೆ ಸದಸ್ಯತ್ವ ನೋಂದಣಿ ಆರಂಭಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಗೌರವಾಧ್ಯಕ್ಷ ಅಂಬಳೆ ಶಿವಣ್ಣ, ಅಧ್ಯಕ್ಷ ಸಂದೀಪ್ ಚಂದ್ರಶೇಖರ್, ಉಪಾಧ್ಯಕ್ಷ ಎಂ.ಬಸವರಾಜು, ಕಾರ್ಯದರ್ಶಿ ಮಲ್ಲಪ್ಪ, ಖಜಾಂಜಿ ವಿ.ಬಸವರಾಜು, ನಿರ್ದೇಶಕರಾದ ಜಿ.ಮಹದೇವಪ್ಪ, ವಿ.ಮಂಜುನಾಥ್, ಯೋಗೇಶ್, ನವೀನ್, ಡಿ.ಸಿ.ಮಂಜುಳಾ, ಕೆ.ಎಂ.ಸೋಮೇಶ್, ಎನ್.ಧರ್ಮೇಂದ್ರ, ಸಮಾಜದ ಮುಖಂಡರಾದ ಮೋಹನ್, ಶಿವಣ್ಣ, ದೇವೇಂದ್ರ ಸ್ವಾಮಿ, ಚನ್ನಪ್ಪ, ರುದ್ರಸ್ವಾಮಿ, ದೀಪಕ್, ಸಂದೇಶ್, ಪ್ರದೀಪ್, ವಿನಯ್, ಸುರೇಶ್, ಪಾರ್ವತಿ, ಗಾಯತ್ರಿ , ಮಧುರಾ, ರೇಖಾ, ನಾಗಮ್ಮ, ನಾಗರಾಜ್, ನಾಗೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.