ADVERTISEMENT

ಮೈಸೂರು ವಿವಿದಲ್ಲಿ ಹಣ ದುರುಪಯೋಗ: ವಿಚಾರಣಾ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 16:22 IST
Last Updated 19 ಏಪ್ರಿಲ್ 2024, 16:22 IST

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ₹55 ಕೋಟಿ ದುರುಪಯೋಗ ಆಗಿರುವ ಬಗ್ಗೆ ರಾಜ್ಯ ಲೆಕ್ಕಪತ್ರ ಮತ್ತು ಹಣಕಾಸು ಇಲಾಖೆ ಆಡಿಟ್ ವರದಿಯಲ್ಲಿ ತಿಳಿಸಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಪ್ರಧಾನ ಜಿಲ್ಲಾ ನಿವೃತ್ತ ನ್ಯಾಯಾಧೀಶರಾದ ಬಸವರಾಜ್‌ ಶಿವಪ್ಪ ತಡಹಾಳ್‌ ನೇತೃತ್ವದಲ್ಲಿ ವಿಚಾರಣಾ ಸಮಿತಿ ನೇಮಿಸಿ ಆದೇಶಿಸಿದ್ದಾರೆ.

ವಿಚಾರಣಾ ಸಮಿತಿ ಸದಸ್ಯರಾಗಿ ರಾಜ್ಯ ಹಣಕಾಸು ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಕ್ಯಾ. ಟಿ.ವೇಣುಗೋಪಾಲ್‌ ರೆಡ್ಡಿ ಅವರನ್ನು ನೇಮಿಸಲಾಗಿದೆ.

ಹಣ ದುರುಪಯೋಗಕ್ಕೆ ಸಂಬಂಧಿಸಿ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಪ್ರೊ.ಮಾನೆ ಡಿ.ಎ, ಪ್ರೊ.ಸಿ.ಬಸವರಾಜು, ಡಾ.ನಿಂಗಮ್ಮ ಬೆಸ್ತೂರು, ಪ್ರೊ.ಟಿ.ಕೆ.ಉಮೇಶ್‌, ಪ್ರೊ.ಆಯಿಷಾ ಶರೀಫ್‌ ಹಾಗೂ ಪ್ರೊ.ಜಿ.ಹೇಮಂತ್‌ ಕುಮಾರ್, ಪ್ರೊ.ಆರ್.ರಾಜಣ್ಣ, ಡಿ.ಭಾರತಿ (ಕೆಎಎಸ್)‌, ಕುಲಸಚಿವರಾಗಿದ್ದ ಪ್ರೊ.ಲಿಂಗರಾಜ್‌ ಗಾಂಧಿ, ಪ್ರೊ.ಆರ್.ಶಿವಪ್ಪ, ಹಣಕಾಸು ಅಧಿಕಾರಿಗಳಾಗಿದ್ದ ಪ್ರೊ.ಬಿ.ಮಹಾದೇವಪ್ಪ, ಪ್ರೊ.ಟಿ.ದೇವರಾಜು, ಕುಲಪತಿಯ ವಿಶೇಷಾಧಿಕಾರಿ ಚೇತನ್‌ ಅವರನ್ನು ವಿಚಾರಣೆಗೆ ಒಳಪಡಿಸಿ ಎರಡು ತಿಂಗಳೊಳಗೆ ಆದೇಶಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.