ಮೈಸೂರು: ಇಲ್ಲಿನ ಮುದ್ದುರಾಮ ಪ್ರತಿಷ್ಠಾನವು ನೀಡುವ 2025ನೇ ಸಾಲಿನ ‘ಮುದ್ದುರಾಮ ಪ್ರಶಸ್ತಿ’ಗೆ ವಿದ್ವಾಂಸ ಟಿ.ವಿ. ವೆಂಕಟಾಚಲಶಾಸ್ತ್ರಿ ಅವರನ್ನು ಆಯ್ಕೆ ಮಾಡಿದೆ.
ಪ್ರಶಸ್ತಿಯು ₹ 50ಸಾವಿರ ಗೌರವಧನ ಹಾಗೂ ಫಲಕ ಒಳಗೊಂಡಿದೆ. ಸೆ.2ರಂದು ಸಂಜೆ 5ಕ್ಕೆ ಇಲ್ಲಿನ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ನಡೆಯುವ ಸಮಾರಂಭದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರದಾನ ಮಾಡುವರು.
ಸಂಸ್ಕೃತ ವಿದ್ವಾಂಸ ಎಚ್.ವಿ.ನಾಗರಾಜರಾವ್ ಅಭಿನಂದನಾ ನುಡಿಗಳನ್ನಾಡುವರು. 1,008 ಚೌಪದಿಗಳನ್ನು ಒಳಗೊಂಡ ‘ಮುದ್ದುರಾಮ ಮಂಜರಿ’ ಕೃತಿ ಬಿಡುಗಡೆ ಮಾಡಲಾಗುವುದು. ವಾಗ್ಮಿಗಳಾದ ಪ್ರೊ.ಎಂ.ಕೃಷ್ಣೇಗೌಡ ಹಾಗೂ ಹಿರೇಮಗಳೂರು ಕಣ್ಣನ್ ಮುಖ್ಯ ಅತಿಥಿಗಳಾಗಿರುವರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.