ADVERTISEMENT

ತಿ.ನರಸೀಪುರ: ಮೂಗೂರು ತ್ರಿಪುರ ಸುಂದರಿ ಅಮ್ಮನವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 3:17 IST
Last Updated 6 ಜನವರಿ 2026, 3:17 IST
ತಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮ ದೇವತೆ ತ್ರಿಪುರ ಸುಂದರಿ ಅಮ್ಮನವರ ರಥೋತ್ಸವ ಸೋಮವಾರ ಜರುಗಿತು
ತಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮ ದೇವತೆ ತ್ರಿಪುರ ಸುಂದರಿ ಅಮ್ಮನವರ ರಥೋತ್ಸವ ಸೋಮವಾರ ಜರುಗಿತು   

ತಿ.ನರಸೀಪುರ: ತಾಲ್ಲೂಕಿನ ಮೂಗೂರು ಗ್ರಾಮ ದೇವತೆ ತ್ರಿಪುರ ಸುಂದರಿ ಅಮ್ಮನವರ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.

ರಥೋತ್ಸವದ ಹಿನ್ನೆಲೆಯಲ್ಲಿ ಬೆಳಿಗ್ಗೆ ದೇವಾಲಯದಲ್ಲಿ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ಅಭಿಷೇಕಗಳು ಜರುಗಿದವು.‌ ಕಂಕಣಧಾರಿ ಅರ್ಚಕರು ಹಾಗೂ ಆಗಮಿಕರು ಧಾರ್ಮಿಕ ಹಾಗೂ ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸಿದರು.

ಬಳಿಕ ಕೈ ವಾಹನಗಳಲ್ಲಿ ಅಮ್ಮನವರ ಉತ್ಸವ ಮೂರ್ತಿ ಹಾಗೂ ಗಣೇಶ ಮೂರ್ತಿಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಅಲಂಕೃತ ರಥಕ್ಕೆ ಸಾಂಪ್ರಾದಾಯಿಕ ಬಲಿ‌ ಪೂಜೆ, ಪ್ರೋಕ್ಷಣೆ ನೆರವೇರಿಸಿ ಅಮ್ಮನವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿದ ಬಳಿಕ‌ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ರಥೋತ್ಸವವು ಗ್ರಾಮದ ರಾಜ ಬೀದಿಯಲ್ಲಿ ಸಾಗಿದ ನಂತರ‌ ಸ್ವಸ್ಥಾನ ತಲುಪಿತು‌.

ADVERTISEMENT

ಗ್ರಾಮಸ್ಥರು ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂ ಆಗಮಿಸಿದ್ದ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ರಥ ಎಳೆದು ಪುನೀತರಾದರು. ಬೆಳಿಗ್ಗೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ಸಾಗಿ ಪೂಜೆ ಸಲ್ಲಿಸಿ ಅಲಂಕೃತ ಅಮ್ಮನವರ ದರ್ಶನ ಪಡೆದರು.

ರಥೋತ್ಸವಕ್ಕೆ ಚಾಲನೆ ವೇಳೆ ವಾಟಾಳು ಸೂರ್ಯ ಸಿಂಹಾಸನ ಮಠದ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.‌ಎಚ್.ಸಿ ಮಹದೇವಪ್ಪ ಸೇರಿದಂತೆ, ಗಣ್ಯರು, ಎಲ್ಲಾ ಮುಖಂಡರು, ಗ್ರಾಮಸ್ಥರು, ಭಕ್ತ ಸಮೂಹದವರು ಹಾಜರಿದ್ದರು. ರಾತ್ರಿ ಅಮ್ಮನವರ ಉತ್ಸವ ಮೂರ್ತಿಯನ್ನು ಆನೆ ವಾಹನೋತ್ಸವದ ಮೂಲಕ ದೇಗುಲಕ್ಕೆ ತರಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.