ADVERTISEMENT

ಕೇತುಪುರ: ಕೊಲೆ ಆರೋಪಿಗಳ ಬಂಧನ

ಪೊಲೀಸರ ಕಾರ್ಯಕ್ಷಮತೆಗೆ ಮೆಚ್ಚುಗೆ ಸೂಚಿಸಿದ ಎಸ್‌.ಪಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 3:50 IST
Last Updated 19 ಸೆಪ್ಟೆಂಬರ್ 2020, 3:50 IST
ಬನ್ನೂರಿನ ಆರಕ್ಷಕ ಠಾಣೆಯಲ್ಲಿ ಶುಕ್ರವಾರ ಕೇತುಪುರ ಗ್ರಾಮದಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್.ಪಿ.ಆರ್.ಶಿವಕುಮಾರ್, ನಂಜನಗೂಡು ಉಪ ವಿಭಾಗದ ಡಿವೈಎಸ್‍ಪಿ ಪ್ರಭಾಕರ್‌ ರಾವ್‌ ಶಿಂಧೆ, ಸಿಪಿಐ ಎಂ.ಆರ್. ಲವ, ಪಿಎಸ್‍ಐ ಪುನೀತ್ ಪ್ರಕರಣದ ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ
ಬನ್ನೂರಿನ ಆರಕ್ಷಕ ಠಾಣೆಯಲ್ಲಿ ಶುಕ್ರವಾರ ಕೇತುಪುರ ಗ್ರಾಮದಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್.ಪಿ.ಆರ್.ಶಿವಕುಮಾರ್, ನಂಜನಗೂಡು ಉಪ ವಿಭಾಗದ ಡಿವೈಎಸ್‍ಪಿ ಪ್ರಭಾಕರ್‌ ರಾವ್‌ ಶಿಂಧೆ, ಸಿಪಿಐ ಎಂ.ಆರ್. ಲವ, ಪಿಎಸ್‍ಐ ಪುನೀತ್ ಪ್ರಕರಣದ ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ   

ಬನ್ನೂರು: ಪಟ್ಟಣದ ಕೇತುಪುರ ಗ್ರಾಮದಲ್ಲಿ ಸೆ. 12ರ ರಾತ್ರಿ ನಡೆದ ಸಿದ್ಧರಾಜು ಎಂಬುವವರ ಕೊಲೆ ಪ್ರಕರಣದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಆರ್.ಸುಭಾಷ್ (23), ಚಂದನ್ (22), ಸಂಜಯ್ (24), ಪುನೀತ್ (22), ವಿನಯ್ (30), ರವಿ (24), ಚಂದ್ರು (25) ಬಂಧಿತರು. ಇವರಿಂದ ಮಾರಕಾಸ್ತ್ರಗಳು, ಮೋಟಾರ್ ಬೈಕ್‍ಗಳು, ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೊಲೆಯಾದ ಸಿದ್ದರಾಜುವಿನ ಪತ್ನಿಯೊಂದಿಗೆ ಆರೋಪಿ ಸಂಜಯ್ ಸ್ನೇಹ ಹೊಂದಿದ್ದು, ಇದೇ ವಿಚಾರವಾಗಿ ಜಗಳ ನಡೆಯುತ್ತಿತ್ತು. ಸೆ. 10ರಂದು ಮನೆಯ ಮುಂದೆ ವೀಲಿಂಗ್ ಮಾಡಿದಾಗ ಗಲಾಟೆ ನಡೆದಿತ್ತು. ಹೀಗಾಗಿ, ಆರೋಪಿಗಳು ಸಂಚು ರೂಪಿಸಿ ಸಿದ್ದರಾಜು ಅವರನ್ನು ಕೊಲೆ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶಿವಕುಮಾರ್ ಹಾಗೂ ಡಿವೈಎಸ್‍ಪಿ ಪ್ರಭಾಕರ್‌ರಾವ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ಸಿಪಿಐ ಎಂ.ಆರ್.ಲವ, ಪಿಎಸ್‍ಐ ಪುನೀತ್, ಸಿಬ್ಬಂದಿಯಾದ ಪ್ರಭಾಕರ್, ಸತೀಶ ಭಾಸ್ಕರ್, ರಮೇಶ್, ಪಚ್ಚೇಗೌಡ, ನಾರಾಯಣ್, ಮಂಜುನಾಥ್, ಸೋಮಶೇಖರ್, ಇಸ್ಮಾಯಿಲ್, ಮಂಜು, ಶಂಕರ್, ಸೋಮಶೇಖರ್, ಗಿರೀಶ್, ನೂರುಲ್ಲಾ, ಗೋಪಾಲಸ್ವಾಮಿ, ಚೌಡಯ್ಯ, ಪುಟ್ಟಸ್ವಾಮಿ, ಮಹದೇವು, ವಸಂತ್, ರೇಖಾ, ಸುನೀತಾ ಕಾರ್ಯಾಚರಣೆ ತಂಡದಲ್ಲಿದ್ದರು. ಇವರ ಕಾರ್ಯಕ್ಷಮತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ನಗದು ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.