
ಮೈಸೂರು: ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ (ಬಿಎಐ) ಆಯೋಜಿಸಿರುವ ಮೈಬಿಲ್ಡ್ ಎಕ್ಸ್‌ಪೋ– 25 ಸೋಮವಾರ ತೆರೆ ಕಂಡಿತು.
ಅಸೋಸಿಯೇಷನ್ ಅಧ್ಯಕ್ಷ ಎನ್.ಸುಬ್ರಹ್ಮಣ್ಯ ಮಾತನಾಡಿ, ‘ಭಾರತ ಸರ್ಕಾರ ವಿಕಸಿತ ಭಾರತ ಕಲ್ಪನೆಯಡಿ 2047ಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಲು ಪ್ರಯತ್ನಿಸುತ್ತಿದೆ. ಇದಕ್ಕೆ ನಮ್ಮ ವಿಭಾಗದ ಶ್ರಮವೂ ಅಗತ್ಯವಿದ್ದು, ಭವಿಷ್ಯದ ಭಾರತದ ಕಲ್ಪನೆ ಇಟ್ಟುಕೊಂಡು ಉತ್ತಮ ಕೆಲಸ ಮಾಡೋಣ’ ಎಂದರು.
‘ಭವಿಷ್ಯದಲ್ಲಿ ನಮ್ಮ ವಲಯಕ್ಕೆ ಬರುವವರಿಗೆ ಮೈಬಿಲ್ಡ್ ಅತ್ಯುತ್ತಮ ವೇದಿಕೆಯಾಗಿದ್ದು, ಇದು ಎಲ್ಲಾ ಪಾಲುದಾರರಿಗೆ ತಂತ್ರಜ್ಞಾನ ಹಾಗೂ ನಿರ್ಮಾಣ ಸಾಮಗ್ರಿಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ’ ಎಂದರು.
ಪತ್ರಕರ್ತ ವಿಕ್ರಂ ಮುತ್ತಣ್ಣ, ಮೈಸೂರು ಬಿಎಐ ಅಧ್ಯಕ್ಷ ವಿ.ಶ್ರೀನಾಥ್, ಕಾರ್ಯದರ್ಶಿ ಸಿ.ಡಿ.ಕೃಷ್ಣ, ಮೈ ಬಿಲ್ಡ್– 25ರ ಅಧ್ಯಕ್ಷ ಆರ್.ರಮೇಶ್ ರಾವ್, ಕಾರ್ಯದರ್ಶಿ ಎನ್.ಲೋಕೇಶ್ ಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.