ADVERTISEMENT

ಮೈಸೂರು: 7 ಮಂದಿಯಲ್ಲಿ ಕೋವಿಡ್–19 ಪತ್ತೆ, ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 8:45 IST
Last Updated 6 ಏಪ್ರಿಲ್ 2020, 8:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಜಿಲ್ಲೆಯಲ್ಲಿ ಸೋಮವಾರ 7 ಮಂದಿ ‘ಕೋವಿಡ್–19’ ಕಾಯಿಲೆಗೆ ಒಳಗಾಗಿದ್ದಾರೆ. ಇಲ್ಲಿಯವರೆಗೆ ಈ ಕಾಯಿಲೆಪೀಡಿತರ ಸಂಖ್ಯೆ 35ಕ್ಕೆ ಏರಿದೆ.

ಹೊಸದಾಗಿ ಪತ್ತೆಯಾದರಲ್ಲಿ ಮೂವರು ನವದೆಹಲಿಯಿಂದ ಬಂದಿದ್ದವರಾಗಿದ್ದರೆ, ಒಬ್ಬರು ನಂಜನಗೂಡಿನ ಔಷಧ ತಯಾರಿಕಾ ಕಾರ್ಖಾನೆಯ ನೌಕರರಾಗಿದ್ದರೆ. ಒಬ್ಬರು ದುಬೈನಿಂದ ವಾಪಸ್ ಬಂದವರಾಗಿದ್ದು, ಮತ್ತೊಬ್ಬರು ಈ ಹಿಂದೆ ಪತ್ತೆಯಾದ ರೋಗಿಯೊಬ್ಬರ ಸೋದರರಾಗಿದ್ದಾರೆ. ಇನ್ನೊಬ್ಬರ ಪ್ರವಾಸದ ಕುರಿತು ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಹೊಸದಾಗಿ ಪತ್ತೆಯಾದವರು 20, 37, 57, 22, 26, 32, 35ರ ವಯೋಮಾನದವರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.