ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿಗಾಗಿ ಗುರುವಾರ ಇಲ್ಲಿ ನಡೆದ ತಾಲೀಮಿನ ವೇಳೆ, ಅಶ್ವಾರೋಹಿ ಪಡೆಯ ಪೊಲೀಸರೊಬ್ಬರು ಕುದುರೆಯಿಂದ ಜಾರಿ ಬಿದ್ದಿದ್ದು, ಯಾವುದೇ ಅಪಾಯವಾಗಿಲ್ಲ.
ಅರಮನೆ ಆವರಣದಲ್ಲಿ ತಾಲೀಮು ನಡೆಯುವಾಗ ಆನೆಗಳನ್ನು ಕಂಡು ಹಾಗೂ ವಾದ್ಯದಸದ್ದಿಗೆ ಕೆಲ ಕುದುರೆಗಳು ಬೆದರಿವೆ. ಅದರಲ್ಲಿ ಒಂದು ಕುದುರೆ ಗಾಬರಿಗೊಂಡು, ಜಿಗಿದು ಓಡಲಾರಂಭಿಸಿತು.ಸವಾರಿ ಮಾಡುತ್ತಿದ್ದ ಪೊಲೀಸ್, ಆಗ ನಿಯಂತ್ರಣ ಕಳೆದುಕೊಂಡರು.
‘ಗಾಬರಿಗೆ ಒಳಗಾದ ಕುದುರೆಯು ಇದೇ ಮೊದಲ ಬಾರಿ ಪಾಲ್ಗೊಂಡಿದೆ. ದಿನದ ಮೊದಲ ಅಭ್ಯಾಸದ ವೇಳೆಗೇ ಈ ಘಟನೆ ನಡೆಯಿತು. ಬಳಿಕ ನಡೆದ ಎರಡನೇ ಸುತ್ತಿನ ತಾಲೀಮಿನಲ್ಲಿ ಯಾವುದೇ ಸಮಸ್ಯೆ ಉಂಟಾಗಲಿಲ್ಲ’ ಎಂದು ಕೆಎಆರ್‌ಪಿ ಮೌಂಟೆಂಡ್ ಕಮಾಂಡೆಂಟ್ ಎಂ.ಜಿ.ನಾಗರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.