ಮೈಸೂರು: ದಸರಾ ಮಹೋತ್ಸವ ಕೊನೆಯ ಚರಣವಾಗಿ ನಡೆಯಲಿರುವ ‘ಪಂಜಿನ ಕವಾಯತು’ ಕಾರ್ಯಕ್ರಮಕ್ಕೆ ಸಾಹಸಿಗರ ತಂಡವು ಮಂಗಳವಾರ ತಾಲೀಮು ನಡೆಸಿತು.
ಬನ್ನಿಮಂಟಪದಲ್ಲಿ ನಡೆದ ತಾಲೀಮಿನಲ್ಲಿ ಭಾರತೀಯ ಸೇನೆಯ ಮಿಲಿಟರಿ ಪೊಲೀಸ್ ಪಡೆಯು ತಂಡದ ನಾಯಕ ಸುಬೇದಾರ್ ಎಂ.ಕೆ. ಸಿಂಗ್ ನೇತೃತ್ವದಲ್ಲಿ ನಾನಾ ಕಸರತ್ತುಗಳನ್ನು ಅಭ್ಯಾಸ ಮಾಡಿತು. ರಾಯಲ್ ಎನ್‌ಫೀಲ್ಡ್, ಹೀರೊ ಎಕ್ಸ್‌ಪಲ್ಸ್ ಬೈಕುಗಳನ್ನೇರಿದ 30ಕ್ಕೂ ಹೆಚ್ಚು ಸಾಹಸಿಗರು ಬೈಕ್ ಮೇಲೆಯೇ ಪಿರಮಿಡ್ ಮಾದರಿ, ಡಬಲ್ ಕ್ರಾಸ್, ಬೆಂಕಿಯ ರಿಂಗ್‌ನಲ್ಲಿ ತೂರುವ ಸಾಹಸ ಮೊದಲಾದವುಗಳನ್ನು ಅಭ್ಯಾಸ ಮಾಡಿದರು.
‘ಶ್ವೇತಾಶ್ವ’ ಎಂದೇ ಹೆಸರಾದ ತಂಡವು ಪ್ರತಿ ವರ್ಷ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತ ಬಂದಿದೆ. ಈ ದಸರೆಯಲ್ಲಿ ಅ.12ರಂದು ಸಂಜೆ ವಿಜಯದಶಮಿ ಅಂಗವಾಗಿ ಬನ್ನಿಮಂಟಪ ಮೈದಾನದಲ್ಲಿ ‘ಪಂಜಿನ ಕವಾಯತು’ ಕಾರ್ಯಕ್ರಮ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.