ADVERTISEMENT

ಮೈಸೂರು: ಕೆವಿಸಿ ಸ್ಪರ್ಧಾತ್ಮಕ ಪರೀಕ್ಷೆ ಕೋಚಿಂಗ್ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 7:59 IST
Last Updated 19 ಡಿಸೆಂಬರ್ 2025, 7:59 IST
<div class="paragraphs"><p>ಪರೀಕ್ಷೆ</p></div>

ಪರೀಕ್ಷೆ

   

ಮೈಸೂರು: ಕೆವಿಸಿ ಗ್ರೂಪ್‌ ಆಶ್ರಯದಲ್ಲಿ ನಗರದ ದಟ್ಟಗಳ್ಳಿ ಸೋಮನಾಥ ನಗರ ರಸ್ತೆಯಲ್ಲಿ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಸ್ಪರ್ಧಾತ್ಮಕ ಪರೀಕ್ಷೆಗೆ ನೆರವಾಗಲು ಕೆವಿಸಿ ಕೋಚಿಂಗ್ ಕೇಂದ್ರ ತೆರೆಯಲಾಗಿದೆ ಎಂದು ಕೆವಿಸಿ ಗ್ರೂಪ್‌ನ ಚೇತನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘12ನೇ ತರಗತಿ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ತೆರೆಯಲಾಗಿದೆ. ನೀಟ್, ಜೆಇಇ, ಸಿಇಟಿ ಮತ್ತು ಬೋರ್ಡ್ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ’ ಎಂದರು.

ADVERTISEMENT

‘ಪ್ರತಿಯೊಂದೂ ವಿಷಯಕ್ಕೆ ₹5000 ಸಾವಿರ ಶುಲ್ಕ ನಿಗದಿ ಮಾಡಲಾಗಿದೆ. ಅನುಭವಿ ಹಾಗೂ ನುರಿತ ಬೋಧಕರು ಇದ್ದಾರೆ. ಪರಿಕಲ್ಪನೆ ಆಧಾರಿತ ಕಲಿಕೆ, ಮಾಕ್‌ ಟೆಸ್ಟ್ ಇರಲಿದೆ. ಅಲ್ಲದೆ, ನಗರದ ವಿದ್ಯಾರ್ಥಿಗಳಿಗೆ ಉಚಿತ ವಾಹನ ಸೌಲಭ್ಯವಿದೆ. ಮಾಹಿತಿಗೆ ಮೊ. 9611550355 ಸಂಪರ್ಕಿಸಬಹುದು ಎಂದರು.

ಕೆವಿಸಿ ಗ್ರೂಪ್‌ನ ನಂದೀಶ್‌ಕುಮಾರ್, ಕಮಲಾಕ್ಷಿ, ಡಾ.ಜೀಜೀ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.