
ಮೈಸೂರು: ಕೊಳ್ಳೇಗಾಲದ ಲೇಖಕಿ ಪಿ.ಕಾತ್ಯಾಯಿನಿ ವಿರಚಿತ ‘ಬಿಚ್ಚಿಟ್ಟ ಭಾವಗಳು’ ಹಾಗೂ ‘ಚಿಕ್ಕಕಥೆಗಳ ಚುಕ್ಕಿ ರಂಗೋಲಿ’ ಕೃತಿಗಳನ್ನು ಇಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು.
ಹೊಯ್ಸಳ ಕನ್ನಡ ಸಂಘ, ‘ಸವಿಗನ್ನಡ’ ಬಳಗದಿಂದ ಕಸಾಪ ಜಿಲ್ಲಾ ಘಟಕದ ಸಹಯೋಗದಲ್ಲಿ ವಿಜಯನಗರದ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕೃತಿಗಳನ್ನು ಬಿಡುಗಡೆ ಮಾಡಿದರು.
ಉದ್ಘಾಟಿಸಿದ ಹೈದರಾಬಾದ್‌ನ ಸಾಹಿತಿ ಡಿ.ಬಿ. ರಾಘವೇಂದ್ರರಾವ್, ‘ಗಜಲ್‌ಗಳದು ಉತ್ತಮ ಲೋಕ. ನಿರಂತರವಾಗಿ ಬರೆಯುತ್ತಿದ್ದರೆ, ಭಾವನೆಗಳನ್ನೇ ವಸ್ತುವಾಗಿ ಇಟ್ಟುಕೊಂಡು ರಚನೆ ಸಿದ್ಧಿಸುತ್ತದೆ. ಗಜಲ್‌ಗಳಿಗೆ ಭಾವನೆಗಳು ಮುಖ್ಯ’ ಎಂದು ಹೇಳಿದರು.
‘ಬಚ್ಚಿಟ್ಟ ಭಾವಗಳು’ ಗಜಲ್ ಸಂಕಲನವನ್ನು ಪುತ್ತೂರಿನ ಪತ್ರಕರ್ತ ಗಣೇಶ್‌ಪ್ರಸಾದ್ ಪಾಂಡೇಲು ಹಾಗೂ ‘ಚಿಕ್ಕಕಥೆಗಳ ಚುಕ್ಕಿ ರಂಗೋಲಿ’ ನ್ಯಾನೊ ಕಥಾಸಂಕಲನವನ್ನು ಹೊಯ್ಸಳ ಕನ್ನಡ ಸಂಘದ ಕಾರ್ಯದರ್ಶಿ ರಂಗನಾಥ್ ಮೈಸೂರು ಪರಿಚಯಿಸಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಕೊಳ್ಳೇಗಾಲ ಸಾಹಿತ್ಯ ಮಿತ್ರಕೂಟದ ಅಧ್ಯಕ್ಷ ಬಾಳಗುಣಸೆ ಮಂಜುನಾಥ್, ಸಿರಿಗನ್ನಡ ವೇದಿಕೆ ರಾಜ್ಯ ಉಪಾಧ್ಯಕ್ಷೆ ಸೌಗಂಧಿಕಾ ಜೋಯ್ಸ್, ಲೇಖಕಿ ಬಿ.ಕೆ. ಮೀನಾಕ್ಷಿ, ಕೊ.ಸು. ನರಸಿಂಹಮೂರ್ತಿ ಮಾತನಾಡಿದರು.
ಮನಿಷಾ, ಪರಮೇಶ್ ಕೆ. ಉತ್ತನಹಳ್ಳಿ ಪ್ರೊ.ಆರ್.ಎ. ಕುಮಾರ್, ಆದಿಲ್ ಪಾಷ ಹಾಡಿದರು. ಕಾತ್ಯಾಯಿನಿ ಸ್ವಾಗತಿಸಿದರು. ಪ್ರಿಯಾ ಕಾರ್ತಿಕೇಯನ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.