ADVERTISEMENT

ಮೈಸೂರು | ದಸರಾ ವಸ್ತುಪ್ರದರ್ಶನ ಕಚೇರಿ ಕಟ್ಟಡಕ್ಕೆ ಬೆಂಕಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2022, 3:54 IST
Last Updated 15 ಡಿಸೆಂಬರ್ 2022, 3:54 IST
ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ (ಪ್ರಜಾವಾಣಿ ಚಿತ್ರ)
ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ (ಪ್ರಜಾವಾಣಿ ಚಿತ್ರ)   

ಮೈಸೂರು: ದಸರಾ ವಸ್ತುಪ್ರದರ್ಶನ‌ ಆವರಣದಲ್ಲಿರುವ ವಸ್ತುಪ್ರದರ್ಶನ‌ ಪ್ರಾಧಿಕಾರದ ಕಚೇರಿ ಕಟ್ಟಡಕ್ಕೆ ಗುರುವಾರ ಬೆಳಿಗ್ಗೆ ಬೆಂಕಿ ಬಿದ್ದಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

'ಕಚೇರಿ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಮಹಿಳಾ ಮತ್ತು ಮಕ್ಕಳ ವಿಭಾಗದ ಕೊಠಡಿಗೆ ಮುಂಜಾನೆ ಬೆಂಕಿ ಬಿದ್ದಿದ್ದು, ಬೆಳಿಗ್ಗೆ 7.50 ಕ್ಕೆ ಠಾಣೆಗೆ ಕರೆ ಬಂದಿದೆ. ಕಾರ್ಯಾಚರಣೆ ನಡೆಸಲಾಗಿದ್ದು, ಅರ್ಧ ಗಂಟೆಯಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ' ಸರಸ್ವತಿಪುರಂನ ಅಗ್ನಿಶಾಮಕ ದಳದ ಅಧಿಕಾರಿ ರಾಜು 'ಪ್ರಜಾವಾಣಿ'ಗೆ ತಿಳಿಸಿದರು‌.

'ಯಾವುದೇ ಪ್ರಾಣಹಾನಿಯಾಗಿಲ್ಲ. ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ' ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.