ಮೈಸೂರು: ‘ಮೈಸೂರು ದಸರಾ ಆಚರಣೆಯು ಈ ಬಾರಿ 11 ದಿನ ಕಾಲ ನಿಗದಿಯಾಗಿರುವುದು ಹೊಸತೇನಲ್ಲ. ಈ ಹಿಂದೆಯೂ ಹಲವು ಬಾರಿ ನಡೆದಿದೆ’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ದಸರಾ 9 ದಿನಗಳ ಕಾಲ ನಡೆಯುವುದು ವಾಡಿಕೆ. ಆದರೆ ಪಂಚಾಂಗದಂತೆ ಈ ಬಾರಿ 11 ದಿನಗಳ ಕಾಲ ಆಚರಣೆ ಇರಲಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಈ ಹಿಂದೆಯೂ ಹಲವು ಬಾರಿ ಅರಮನೆಯ ಪಂಚಾಂಗದ ಅನ್ವಯ ದಸರಾವನ್ನು 8, 10, 11 ದಿನಗಳ ಕಾಲ ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗಿದೆ. ಈ ಬಾರಿಯೂ ಅದರಂತೆಯೇ ಆಚರಿಸಲಾಗುವುದು. ಇದರಲ್ಲಿ ವಿಶೇಷವಿಲ್ಲ. ನವರಾತ್ರಿ ಆಚರಣೆಯು ಈ ಹಿಂದಿನಂತೆಯೇ ಸಾಂಪ್ರದಾಯಕವಾಗಿ ನಡೆಯಲಿದೆ’ ಎಂದಿದ್ದಾರೆ.
‘1920, 1929, 1952, 1962, 1980, 1990, 1998, 2000, 2015 ಹಾಗೂ 2016ರಲ್ಲಿಯೂ ದಸರಾ ಆಚರಣೆ 11 ದಿನಗಳ ಕಾಲ ನಡೆದಿತ್ತು’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.