ADVERTISEMENT

ಹನೂರು | ವಿಚಿತ್ರ ಖಾಯಿಲೆಯಿಂದ 28 ಮೇಕೆ ಸಾವು

​ಪ್ರಜಾವಾಣಿ ವಾರ್ತೆ
Published 2 ಮೇ 2024, 15:28 IST
Last Updated 2 ಮೇ 2024, 15:28 IST
ಹನೂರು ತಾಲೂಕಿನ ದಿನ್ನಳ್ಳಿ ಗ್ರಾಮದಲ್ಲಿ ವಿಚಿತ್ರ ಖಾಯಿಲೆಗೆ ತುತ್ತಾಗಿ ನರಳುತ್ತಿರುವ ಮೇಕೆಗಳು
ಹನೂರು ತಾಲೂಕಿನ ದಿನ್ನಳ್ಳಿ ಗ್ರಾಮದಲ್ಲಿ ವಿಚಿತ್ರ ಖಾಯಿಲೆಗೆ ತುತ್ತಾಗಿ ನರಳುತ್ತಿರುವ ಮೇಕೆಗಳು   

ಹನೂರು: ತಾಲ್ಲೂಕಿನ ದಿನ್ನಳ್ಳಿ ಗ್ರಾಮದಲ್ಲಿ ವಿಚಿತ್ರ ಖಾಯಿಲೆಗೆ ಮೇಕೆಗಳು ಧಾರುಣವಾಗಿ ಸಾವನ್ನಪ್ಪುತ್ತಿದ್ದು ರೈತರಲ್ಲಿ ಆತಂಕ ಮೂಡಿಸಿದೆ.

ಹುಣಸೆ ಮರದ ದೊಡ್ಡಿಯ ದಾಸು ನಾಯ್ಕ ಅವರ 9 , ಮಾದೇವರ 6, ದಿನ್ನಳ್ಳಿಯ ಚತೃ ನಾಯ್ಕರ 8, ಮೋಹನ್ ನಾಯ್ಕರ 5 ಐದು ಮೇಕೆಗಳು ಸೇರಿ ಒಂದು ವಾರದ ಅವಧಿಯಲ್ಲಿ ಒಟ್ಟು 28 ಮೇಕೆ ಗಳು ಸಾವನ್ನಪ್ಪಿವೆ. ಮೇಕೆಯ ಬಾಯಿಂದ ಜೊಲ್ಲು ಸುರಿಯುವುದು ಹಾಗೂ ಭೇದಿ ರೋಗ ಕಾಣಿಸಿಕೊಂಡು ಮೇವು ಮೇಯದೆ ಸ್ಥಳದಲ್ಲೇ ಸಾಯುವ ಹಂತಕ್ಕೆ ಬಂದು ನಿಂತಿದೆ. ಇದು ಒಂದು ಮೇಕೆಯಿಂದ ಮತ್ತೊಂದು ಮೇಕೆಗೆ ಹರಡುತ್ತಿರುವುದರಿಂದ ಆರೋಗ್ಯವಾಗಿರುವ ಮೇಕೆಗಳು ಕೂಡ ಖಾಯಿಲೆಗೆ ತುತ್ತಾಗಿ ಸಾವಿಗೀಡಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

‘ದಿನ್ನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೇಕೆಗಳು ಮತಪಟ್ಟಿರುವುದು ಗಮನಕ್ಕೆ ಬಂದಿರಲಿಲ್ಲ, ನಾಳೆಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು’ ಎಂದು ಪಶು ವೈದ್ಯಾಧಿಕಾರಿ ಸಿದ್ದರಾಜು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.