ADVERTISEMENT

ಕ್ಯಾನ್ಸರ್‌ಪೀಡಿತರಿಗೆ ತನ್ನ ಸೊಂಪಾದ ಕೇಶ ದಾನ ಮಾಡಿದ ಮೈಸೂರು ಯುವತಿ

ಬೆಂಗಳೂರಿನ ಇಂಡಿಯನ್ ಕ್ಯಾನ್ಸರ್ ಸೊಸೈಟಿಗೆ ದಾನ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 5:33 IST
Last Updated 23 ಡಿಸೆಂಬರ್ 2021, 5:33 IST
ಸ್ವರ್ಣಾ ಕಿತ್ತೂರು
ಸ್ವರ್ಣಾ ಕಿತ್ತೂರು   

ಮೈಸೂರು: ಇಲ್ಲಿನ ಹೆಬ್ಬಾಳುವಿನ ನಿವಾಸಿ ಹಾಗೂ ಇತ್ತೀಚೆಗಷ್ಟೇ ಸ್ನಾತಕೋತ್ತರ ಪದವಿ ಪೂರೈಸಿದ ಸ್ವರ್ಣಾ ಕಿತ್ತೂರು ಅವರು ತಮ್ಮ 18 ಇಂಚು ತಲೆಗೂದಲನ್ನು ಕ್ಯಾನ್ಸರ್‌ಪೀಡಿತರಿಗಾಗಿ ಬೆಂಗಳೂರಿನ ಇಂಡಿಯನ್ ಕ್ಯಾನ್ಸರ್ ಸೊಸೈಟಿಗೆ ದಾನವಾಗಿ ನೀಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಅವರನ್ನು ಸಂಪರ್ಕಿಸಿದಾಗ ಅವರು, ‘ನನ್ನ ಮನೆಯ ಸಮೀಪದ ನಿವಾಸಿಯೊಬ್ಬರು ಕ್ಯಾನ್ಸರ್‌ಪೀಡಿತರಿದ್ದರು. ಅವರು ಪ್ರತಿ ಬಾರಿಯೂ ತಲೆಯನ್ನು ವೇಲ್‌ನಿಂದ ಮುಚ್ಚಿಕೊಂಡು ಹೋಗುತ್ತಿದ್ದರು. ಇದನ್ನು ನೋಡಿ ದಾನ ಮಾಡಲು ನಿರ್ಧರಿಸಿದೆ. ಇಂಡಿಯನ್ ಕ್ಯಾನ್ಸರ್ ಸೊಸೈಟಿಯವರು ಕೂದಲು ಕನಿಷ್ಠ 12 ಇಂಚು ಉದ್ದವಿರಬೇಕು ಎಂದು ಹೇಳಿದರು. ಆದರೆ, ನನ್ನದು 18 ಇಂಚು ಉದ್ದವಿತ್ತು’ ಎಂದರು.

‘ನನಗೆ ಮತ್ತೆ ಸೊಂಪಾದ ಕೂದಲು ಬೆಳೆಯುತ್ತದೆ. ಆದರೆ, ಕ್ಯಾನ್ಸರ್‌ಪೀಡಿತರಿಗೆ ಕೂದಲು ಬರುವುದು ಕಷ್ಟ. ಅಪ್ಪ, ಅಮ್ಮರನ್ನು ಒಪ್ಪಿಸಿ ಈ ಕಾರ್ಯ ಮಾಡಿದೆ. ಇದರಿಂದ ನನಗೆ ಖುಷಿಯಾಗಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.