ADVERTISEMENT

ಹಿಂದಣ ಹೆಜ್ಜೆ... 2025ರಲ್ಲಿ ಮೈಸೂರಿನಲ್ಲಿ ಏನೇನಾಯಿತು?

ಎಂ.ಮಹೇಶ
Published 26 ಡಿಸೆಂಬರ್ 2025, 3:26 IST
Last Updated 26 ಡಿಸೆಂಬರ್ 2025, 3:26 IST
<div class="paragraphs"><p>ಮೈಸೂರು ಅರಮನೆ</p></div>

ಮೈಸೂರು ಅರಮನೆ

   

ಪ್ರಜಾವಾಣಿ ಚಿತ್ರ: ರಂಜು ಪಿ

2025ರಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಇಲ್ಲಿವೆ

ADVERTISEMENT

ಜ.5: ಮೈಸೂರಿನ ಜೆ.ಕೆ. ಮೈದಾನದಲ್ಲಿ ಸಿಟಿಜನ್ಸ್‌ ಫಾರ್‌ ಸೋಶಿಯಲ್ ಜಸ್ಟೀಸ್‌ನಿಂದ ‘ಸಂವಿಧಾನವನ್ನು ಬದಲಾಯಿಸಿದ್ದು ಯಾರು?’ ಕೃತಿಯ ವಿಚಾರಗೋಷ್ಠಿ ಬಿಹಾರದ ರಾಜ್ಯಪಾಲ ಆರೀಫ್ ಮೊಹಮದ್ ಖಾನ್ ಭಾಷಣ.

ಜ.24: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಂದ ಜೆಡಿಎಸ್‌ ಕಾರ್ಯಕರ್ತರ ಸಭೆ. ಕೆ.ಆರ್.ನಗರದ ರೇಡಿಯೊ ಮೈದಾನದಲ್ಲಿ ಜೆಡಿಎಸ್‌ನಿಂದ ಬೃಹತ್‌ ಕೃತಜ್ಞತಾ ಸಭೆ. ಎಚ್‌ಡಿಕೆ ಭಾಗಿ. ಎರಡರಿಂದಲೂ ದೂರ ಉಳಿದ ಜಿಟಿಡಿ. 

ಫೆ.7: ಮುಡಾ ನಿವೇಶನ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದ್ದಕ್ಕೆ ಮೈಸೂರಿನಲ್ಲಿ ಕಾಂಗ್ರೆಸ್‌ ಸಂಭ್ರಮಾಚರಣೆ.

ಮಾರ್ಚ್‌ 7: ರಾಜ್ಯ ಬಜೆಟ್‌ನಲ್ಲಿ ತವರು ಜಿಲ್ಲೆಗೆ ಹಲವು ಕೊಡುಗೆ ಘೋಷಿಸಿದ ಮುಖ್ಯಮಂತ್ರಿ.

ಏ.4: ಮೈಸೂರು ವಿ.ವಿ.ಯ 2025–26ನೇ ಸಾಲಿನ ₹107.72 ಕೋಟಿ ಕೊರತೆ ಬಜೆಟ್‌.

ಏ.7: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೈಗೊಂಡಿದ್ದ 16 ದಿನಗಳ ‘ಜನಾಕ್ರೋಶ’ ಯಾತ್ರೆಗೆ ನಗರದಲ್ಲಿ ಚಾಲನೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ‍ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮೊದಲಾದವರು ಭಾಗಿ.

ಏ.14: ಮೈಸೂರಿನ ರೋಟರಿಯಲ್ಲಿ ಸಿಪಿಐಎಂ ರಾಜಕೀಯ ಸಮಾವೇಶ.

ಏ.26ರಿಂದ 28: ಮೈಸೂರಿನಲ್ಲಿ ಕಾಂಗ್ರೆಸ್‌ನಿಂದ ಯುವ ಕ್ರಾಂತಿ ಬುನಾದಿ ಕಾರ್ಯಕಾರಿ ತರಬೇತಿ ಶಿಬಿರ ಸಿಎಂ ಡಿಸಿಎಂ ಹಲವು ಸಚಿವರು ಭಾಗಿ. 

ಮೇ 1: ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಎಐಟಿಯುಸಿ ಸಿಐಟಿಯು ಎಐಯುಟಿಯುಸಿ ಎಐಸಿಸಿಟಿಯು ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳಿಂದ ಮೆರವಣಿಗೆ ವಿವಿಧ ಹಕ್ಕೊತ್ತಾಯ ಮಂಡನೆ.

ಮೇ 2: ಏಕಲವ್ಯ ಪ್ರಶಸ್ತಿ ಪುರಸ್ಕೃತ ಮಾಜಿ ಮೇಯರ್‌ ಎನ್.ಪ್ರಕಾಶ್ ನಿಧನ.

ಮೇ 12: ಎಚ್‌.ಡಿ. ಕೋಟೆಯಲ್ಲಿ ₹ 140 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ– ಸಿಎಂ ಭಾಗಿ.

ಮೇ 23: ಕೆ.ಆರ್.ನಗರದಲ್ಲಿ ₹ 404 ಕೋಟಿ ಮೊತ್ತದ  ಅಭಿವೃದ್ಧಿ ಯೋಜನೆಗೆ ಚಾಲನೆ ಉದ್ಘಾಟನೆ– ಸಿಎಂ ಭಾಗಿ.

ಮೇ 24: ಮೈಸೂರು ನಗರ ಹಿನಕಲ್ ಮತ್ತು ಜಿಲ್ಲೆಯ ವಿವಿಧೆಡೆ ಸ್ಥಾಪಿಸಿದ 9 ಇಂದಿರಾ ಕ್ಯಾಂಟೀನ್‌ ಉದ್ಘಾಟಿಸಿದ ಸಿಎಂ.

ಮೇ 26: ಪಿರಿಯಾಪಟ್ಟಣದಲ್ಲಿ ₹ 439.88 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗೆ ಚಾಲನೆ ಉದ್ಘಾಟನೆ– ಸಿಎಂ ಭಾಗಿ. ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ನೀಡುವ 7ನೇ ಸುತ್ತಿನ ಅಭಿಯಾನಕ್ಕೆ ರಾಜ್ಯಮಟ್ಟದಲ್ಲಿ ಚಾಲನೆ.

ಜೂನ್‌ 11: ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಎಲ್‌.ಮಹದೇವಸ್ವಾಮಿ ಬದಲಾವಣೆ ಕೆ.ಎನ್. ಸುಬ್ಬಣ್ಣ ಆಯ್ಕೆ.

ಜುಲೈ 1: ಮೈಸೂರು ಪಾಲಿಕೆ ಮಾಜಿ ಸದಸ್ಯ ಕೆ.ಎಂ. ಶಂಕರ್ ನಿಧನ.

ಜುಲೈ 6: ಬಿಜೆಪಿ ಗ್ರಾಮಾಂತರ ಘಟಕದಿಂದ ರಾಜೇಂದ್ರ ಕಲ್ಯಾಣಮಂಟಪದಲ್ಲಿ ವಿಶೇಷ ಸಭೆ ಬಿ.ವೈ. ವಿಜಯೇಂದ್ರ ಭಾಷಣ.

ಜುಲೈ 7: ಮಹಾರಾಷ್ಟ್ರದ ವಾರ್ಧಾದ ಗಾಂಧಿ ಆಶ್ರಮದಲ್ಲಿ ಸೇವೆ ಮಾಡಿದ್ದ ಗಾಂಧಿವಾದಿ ಶಶಿರೇಖಾ ನಂಜನಗೂಡು ತಾಲ್ಲೂಕು ತಗಡೂರಿನಲ್ಲಿ ನಿಧನ.

ಜುಲೈ 18: ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ.

ಜುಲೈ 11: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮೈಸೂರು ಮಹಾನಗರ ಪಾಲಿಕೆ ನೌಕರರ ಸಂಘದವರು ನಡೆಸಿದ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗಿ.

ಜುಲೈ 27: ಸಿಪಿಐಎಂನಿಂದ ಗಾಂಧಿ ವೃತ್ತದಲ್ಲಿ ಪ್ರಚಾರಾಂದೋಲನ.

ಜುಲೈ 30: ನಂಜನಗೂಡು ನಗರಸಭೆಯಲ್ಲಿ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದ ನಾಲ್ವರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು. ಗಿರೀಶ್‌ ಕುಮಾರ್ ಮುರುಗೇಶ್‌ ಮೀನಾಕ್ಷಿ ನಾಗರಾಜ್‌ ಹಾಗೂ ವಿಜಯಲಕ್ಷ್ಮಿ ಕುಮಾರ್ ಸದಸ್ಯತ್ವ ಕಳೆದುಕೊಂಡರು.

ಆ.7: ತಿ. ನರಸೀಪುರ ತಾಲ್ಲೂಕು ತಲಕಾಡು ಗ್ರಾ.ಪಂ. ಜೊತೆ ಬಿ.ಶೆಟ್ಟಿಹಳ್ಳಿ ಪಂಚಾಯಿತಿಯ ಟಿ.ಬೆಟ್ಟಹಳ್ಳಿ ಮತ್ತು ಕೂರಬಾಳನಹುಂಡಿ ಗ್ರಾಮಗಳನ್ನು ಸೇರಿಸಿ ತಲಕಾಡು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಮ್ಮತಿ.

ಆ.9: ನಂಜನಗೂಡು ತಾಲ್ಲೂಕು ಹದಿನಾರು ಗ್ರಾಮದಲ್ಲಿ ವರುಣ ಕ್ಷೇತ್ರದ ₹ 1107 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಶಂಕುಸಸ್ಥಾಪನೆ ಉದ್ಘಾಟನೆ. ಫಲಾನುಭವಿಗಳಿಗೆ ಸವಲತ್ತು–ಸಿಎಂ ಭಾಗಿ.

ಆ. 17: ಕನ್ನಡಪರ ಹೋರಾಟಗಾರ ಸ.ರ. ಸುದರ್ಶನ ನಿಧನ.

ಅ.17: ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ‘ಯುವ ಸಮೃದ್ಧಿ ಸಮ್ಮೇಳನ’. ಸಿಎಂ ಭಾಗಿ.

ಅ.23: ‘ಮೈಮುಲ್‌’ (ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ) ನೂತನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಕೆ.ಈರೇಗೌಡ ಅವಿರೋಧ ಆಯ್ಕೆ. ಎಚ್‌.ಡಿ. ಕೋಟೆ ತಾಲ್ಲೂಕಿಗೆ ಇದೇ ಮೊದಲಿಗೆ ಸಿಕ್ಕ ಸ್ಥಾನ.

ನ.3: ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪ್ರತಿಮೆ ಅನಾವರಣಗೊಳಿಸಿದ ಮುಖ್ಯಮಂತ್ರಿ. ಅನಾವರಣಕ್ಕೆ ಒತ್ತಾಯಿಸಿ ಎಂಎಲ್‌ಸಿ ಎ.ಎಚ್. ವಿಶ್ವನಾಥ್ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ರಘು (ಕೌಟಿಲ್ಯ) ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಪ್ರತಿಮೆ ಅರಸು ಅವರನ್ನು ‘ಹೋಲುತ್ತಿಲ್ಲ’ ಎಂಬ ಆಕ್ಷೇಪವೂ ವ್ಯಕ್ತ. 

ನ.5: ಮೈಸೂರು ನಗರಾಭಿವೃದ್ಧಿ ‍ಪ್ರಾಧಿಕಾರ(ಮುಡಾ)ದ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್ ಮತ್ತು ಮಾಜಿ ಮೇಯರ್‌ ಬಿ.ಕೆ. ಪ್ರಕಾಶ್ ಕೆಪಿಸಿಸಿ ಸದಸ್ಯರಾಗಿ ನೇಮಕ.

ನ.10: ಸಿಎಂ ಸಿದ್ದರಾಮಯ್ಯ ಅವರಿಂದ ಸತತ 10 ತಾಸು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಅನುಷ್ಠಾನದ ಪ್ರಗತಿ ಪರಿಶೀಲನೆ.

ನ.14: ನಂಜನಗೂಡು ತಾ. ಹದಿನಾರು ಸಮೀಪದ ಬಿಳಿಕೆರೆ ಮಹದೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ.

ನ.27: ಸಾಲಿಗ್ರಾಮ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪಕ್ಕೆ ಸಚಿವ ಸಂಪುಟ ಅಸ್ತು.

ನ.30: ಸರಗೂರು ಎಚ್‌.ಡಿ. ಕೋಟೆಯಲ್ಲಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಪ್ರವಾಸ. ಹುಲಿದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ.

ನ.30: ಮೈಸೂರಿನ ರಾಜಕೀಯ ಮುಖಂಡ ಯು.ಎಂ. ಶಾಂತಪ್ಪ (93) ನಿಧನ.

ಡಿ.19: ಕೇಂದ್ರ ಸರ್ಕಾರವು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಇ.ಡಿ. ಬಳಸಿಕೊಂಡು ತೊಂದರೆ ನೀಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ.

ಡಿ. 21: ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ

ಡಿ.22: ಸಿಪಿಐಎಂ ನೂರು ವರ್ಷದ ಅಂಗವಾಗಿ ಗಾಂಧಿ ವೃತ್ತದಲ್ಲಿ ಬಹಿರಂಗ ಸಭೆ.

ಡಿ.23: ರಾಜ್ಯ ರೈತ ಸಂಘದಿಂದ ಇಲವಾಲದಲ್ಲಿ ಜಿಲ್ಲಾ ರೈತ ಸಮಾವೇಶ ಹಕ್ಕೊತ್ತಾಯ ಮಂಡನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.