ಮೈಸೂರು: ‘ಕವಿತೆಯು ಮಾತು–ಮೌನದ ನಡುವಿನ ಸಂಘರ್ಷ’ ಎಂದು ಸಾಹಿತಿ ಪ್ರೊ.ರಾಮೇಗೌಡ (ರಾಗೌ) ವ್ಯಾಖ್ಯಾನಿಸಿದರು.
ಇಲ್ಲಿನ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಗುರುವಾರ ಆಯೋಜಿಸಿದ್ದ ‘ತೇಜಸ್ವಿ ಸಾಹಿತ್ಯ ಚಿಂತನೆ ಹಾಗೂ ನಾಡಹಬ್ಬ ದಸರಾ ಕವಿಗೋಷ್ಠಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕವಿತೆ ಬರೆಯಲು ನಿಖರವಾದ ತರಬೇತಿ ಮುಖ್ಯ. ಪ್ರತಿಯೊಬ್ಬರಲ್ಲೂ ಸೃಜನಶೀಲತೆ ಇರುತ್ತದೆ. ಅದನ್ನು ಬಳಸಿಕೊಳ್ಳಬೇಕು. ಕಾವ್ಯದಲ್ಲಿ ಸೃಜನಶೀಲತೆ ಯಾವಾಗಲು ಸ್ಥಗಿತವಾಗಿರುವುದಿಲ್ಲ. ಕನ್ನಡ ಕವಿತೆಯ ಸೃಷ್ಟಿಯ ಸಂದರ್ಭವನ್ನು ತಿಳಿದು, ಹಿರಿಯ ಕವಿಗಳ ಕವಿತೆಗಳನ್ನು ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.
ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕ್ಕಮಹಾದೇವಿ ಸಂಶೋಧನಾ ಪೀಠದ ನಿರ್ದೇಶಕಿ ಕವಿತಾ ರೈ ಮಾತನಾಡಿದರು.
ವಿದ್ಯಾರ್ಥಿನಿಯರಾದ ನಿತ್ಯಾ ಎನ್., ಸರಸ್ವತಿ, ಸೋನಾಕ್ಷಿ ಎಂ., ದಿವ್ಯಾ ಆರ್. ಹಾಗೂ ಪಿ. ಸರಸ್ವತಿ ‘ತೇಜಸ್ವಿ ಸಾಹಿತ್ಯ’ ಕುರಿತು ಪ್ರಬಂಧ ಮಂಡಿಸಿದರು. ವಿದ್ಯಾರ್ಥಿನಿಯರಾದ ರೇವತಿ ಎಸ್., ಪೂಜಾ ಎಂ., ಪಲ್ಲವಿ ಕೆ., ಹೇಮಾ ಪಿ., ಕುಸುಮಾ, ದಿವ್ಯಾ ಆರ್., ಅನುಷಾ, ಪ್ರೀತಿ, ಮಹಾಲಕ್ಷ್ಮಿ, ಕೆ.ಎಸ್. ಐಶ್ವರ್ಯಾ ಕವಿತೆ ವಾಚಿಸಿದರು.
ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಎಂ. ಶಾರದಾ, ಕನ್ನಡ ವಿಭಾಗದ ಮುಖ್ಯಸ್ಥ ಜಿ.ಪ್ರಸಾದ ಮೂರ್ತಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.