ADVERTISEMENT

ನಂಜನಗೂಡು ಕೊರೊನಾ ಸೋಂಕು ಪ್ರಕರಣದ ತನಿಖೆಯೇ ದಾರಿ ತಪ್ಪಿದೆ: ಶಾಸಕ

​ಪ್ರಜಾವಾಣಿ ವಾರ್ತೆ
Published 4 ಮೇ 2020, 19:42 IST
Last Updated 4 ಮೇ 2020, 19:42 IST
ಹರ್ಷವರ್ಧನ್‌
ಹರ್ಷವರ್ಧನ್‌   

ಮೈಸೂರು: ‘ಕೊರೊನಾ ಸೋಂಕು ಪ್ರಸರಣ ಪ್ರಕರಣದಲ್ಲಿ ನಂಜನಗೂಡಿನ ಔಷಧ ಕಾರ್ಖಾನೆಯದ್ದು ತಪ್ಪೇ ಇಲ್ಲ ಎಂಬಂತೆ ಬಿಂಬಿಸಿ, ನನ್ನನ್ನು ತಪ್ಪಿತಸ್ಥನಾಗಿಸುವ ಯತ್ನ ನಡೆದಿದೆ’ ಎಂದು ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಆರೋಪಿಸಿದರು.

‘ಪ್ರಕರಣದಲ್ಲಿ ನಂಜನಗೂಡಿಗೆ ಕೆಟ್ಟ ಹೆಸರು ಬಂದಿದೆ. ಜನರ ಹಿತಕ್ಕಾಗಿ ತನಿಖೆಗೆ ಆಗ್ರಹಿಸಿದ್ದೆ. ಸರ್ಕಾರ ವಿಳಂಬ ಮಾಡಿ ಕೊನೆಗೆ ಐಎಎಸ್‌ ಅಧಿಕಾರಿ ಹರ್ಷ ಗುಪ್ತ ಅವರನ್ನು ನೇಮಿಸಿತು. ಆದರೆ, ತನಿಖೆಯೇ ದಾರಿ ತಪ್ಪಿದೆ. ಪ್ರಕರಣ ಎಷ್ಟು ಆಳವಾಗಿದೆ ಎಂಬುದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು’ ಎಂದು ಸೋಮವಾರ ಹೇಳಿದರು.

‘ನನ್ನ ಕಡೆಯಿಂದ ಎಲ್ಲ ಪ್ರಯತ್ನ ಹಾಕಿದೆ. ಸರಿಯಾಗಿ ತನಿಖೆ ನಡೆಸಲು ಸಾಧ್ಯವಾಗಿಲ್ಲವೆಂದು ತನಿಖಾಧಿಕಾರಿಯೇ ಹೇಳಿದ ಮೇಲೆ ನಾನು ಇನ್ನೇನು ಮಾಡುವುದು. ನನಗಂತೂ ತುಂಬಾ ನಿರಾಸೆಯಾಗಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.