ADVERTISEMENT

ನಂಜನಗೂಡು: ಜೂ. 21ರಂದು ಹನುಮ ಜಯಂತಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 12:29 IST
Last Updated 6 ಜೂನ್ 2025, 12:29 IST
ನಂಜನಗೂಡಿನ ಚಿಂತಾಮಣಿ ಗಣಪತಿ ದೇವಾಲಯದ ಆವರಣದಲ್ಲಿ ಬುಧವಾರ ಶರಣ ಸಂಗಮ ಮಠದ ನಾಗರಾಜ ಸ್ವಾಮಿಜೀ ಹನುಮ ಜಯಂತಿಯ ಪ್ರಚಾರದ ಪೋಸ್ಟರ್ ಬಿಡುಗಡೆ ಮಾಡಿದರು.
ನಂಜನಗೂಡಿನ ಚಿಂತಾಮಣಿ ಗಣಪತಿ ದೇವಾಲಯದ ಆವರಣದಲ್ಲಿ ಬುಧವಾರ ಶರಣ ಸಂಗಮ ಮಠದ ನಾಗರಾಜ ಸ್ವಾಮಿಜೀ ಹನುಮ ಜಯಂತಿಯ ಪ್ರಚಾರದ ಪೋಸ್ಟರ್ ಬಿಡುಗಡೆ ಮಾಡಿದರು.   

ನಂಜನಗೂಡು: ನಗರದಲ್ಲಿ ಜೂ.21ರಂದು ಪ್ರತಿ ವರ್ಷದಂತೆ ವೀರಾಜಂನೇಯ ಧರ್ಮ ಜಾಗೃತಿ ಬಳಗದ ವತಿಯಿಂದ ಅದ್ದೂರಿಯಾಗಿ ಹನುಮ ಜಯಂತಿ ಆಚರಿಸಲಾಗುತ್ತದೆ ಎಂದು ದೇವೀರಮ್ಮನಹಳ್ಳಿ ಶರಣ ಸಂಗಮ ಮಠದ ನಾಗರಾಜ ಸ್ವಾಮೀಜಿ ಹೇಳಿದರು.

ನಗರದ ಚಿಂತಾಮಣಿ ಗಣಪತಿ ದೇವಾಲಯದ ಆವರಣದಲ್ಲಿ ಬುಧವಾರ ಹನುಮ ಜಯಂತಿಯ ಪ್ರಚಾರದ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಜೂ. 21ರಂದು ಶ್ರೀಕಂಠೇಶ್ವರ ದೇವಾಲಯದ ಮುಂಭಾಗದಿಂದ ವಿವಿಧ ಜನಪದ ತಂಡ, ಹನುಮನ ವಿವಿಧ ಸ್ತಬ್ಧ ಚಿತ್ರಗಳೊಂದಿಗೆ ನಗರದಲ್ಲಿ ನಡೆಯುವ ಅದ್ದೂರಿ ಮೆರವಣಿಗೆಯಲ್ಲಿ ಸಾವಿರಾರು ಯುವಕರು ಭಾಗವಹಿಸಲಿದ್ದಾರೆ. ಹನುಮ ಜಯಂತಿ ಪ್ರಯುಕ್ತ ಜೂ.14 ರಂದು ನಗರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಸಾವಿರಾರು ಭಕ್ತರು ಹನುಮಾನ್ ಚಾಲೀಸ ಪಠಿಸಲಿದ್ದಾರೆ ಎಂದು ಹೇಳಿದರು.

ADVERTISEMENT

ವೀರಾಂಜನೇಯ ಧರ್ಮ ಜಾಗೃತಿ ಬಳಗದ ಚಂದ್ರ ಶೇಖರ್,ನಿತೀನ್ ಕುಮಾರ್,ಅನಂತ,ಉಮೇಶ್,ಸುನೀಲ್ ಕುಮಾರ್,ಗಿರೀಶ್,ಕಿಶೋರ್,ಮಾಧುರಾಜ್,ಶ್ರೀಕಾಂತ್ ಜೋಯಿಷ್,ಸುಜಯ್,ರವಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.