ADVERTISEMENT

ಮೈಸೂರು | ವಿಜ್ಞಾನದಿಂದ ಹೊಸ ಅರಿವು: ಪ್ರೊ.ಎಸ್.ಶಿವರಾಜಪ್ಪ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 4:08 IST
Last Updated 1 ಮಾರ್ಚ್ 2026, 4:08 IST
ಮೈಸೂರಿನ ವಾತ್ಸಲ್ಯ ಶಿಕ್ಷಣ ಕಾಲೇಜಿನಲ್ಲಿ ಶನಿವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನದ ಕಾರ್ಯಕ್ರಮವನ್ನು ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಉದ್ಘಾಟಿಸಿದರು
ಮೈಸೂರಿನ ವಾತ್ಸಲ್ಯ ಶಿಕ್ಷಣ ಕಾಲೇಜಿನಲ್ಲಿ ಶನಿವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನದ ಕಾರ್ಯಕ್ರಮವನ್ನು ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಉದ್ಘಾಟಿಸಿದರು   

ಮೈಸೂರು: ‘ಹೊಸ ಅರಿವನ್ನು ಉಂಟು ಮಾಡುವ ಜ್ಞಾನವೇ ವಿಜ್ಞಾನ’ ಎಂದು ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಹೇಳಿದರು.

ಇಲ್ಲಿನ ಖಿಲ್ಲೆ ಮೊಹಲ್ಲಾದ ನಟರಾಜ ಪ್ರತಿಷ್ಠಾನದ ವಾತ್ಸಲ್ಯ ಶಿಕ್ಷಣ ಕಾಲೇಜಿನಲ್ಲಿ ಶನಿವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನದ ಕಾರ್ಯಕ್ರಮದಲ್ಲಿ ಸಿ.ವಿ.ರಾಮನ್ ಫೋಟೊಗೆ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಜ್ಞಾನ ಸದಾ ಕ್ರಿಯಾಶೀಲ ಹಾಗೂ ಚಲನಶೀಲವಾದುದು. ಎಲ್ಲ ‍ಪ್ರಮುಖ ಗ್ರಂಥಗಳಲ್ಲೂ ವಿಜ್ಞಾನ ಇದೆ. ಆಯುರ್ವೇದಲ್ಲೂ ಇದೆ. ಮಾನವ ಕಲ್ಯಾಣ ವಿಜ್ಞಾನ ಎಲ್ಲೆಡೆ ಬೆಳಗಬೇಕು’ ಎಂದು ಆಶಿಸಿದರು.

ADVERTISEMENT

ವಾತ್ಸಲ್ಯ ಶಿಕ್ಷಣ ಕಾಲೇಜಿನ ಸಂಯೋಜಕ ಪ್ರೊ.ಜಯಪ್ರಕಾಶ್‌ ಎಂ.ಆರ್., ‘ವಿಜ್ಞಾನ ಎಂದರೆ ಸತ್ಯ ಅನ್ವೇಷಣೆ. ನೀರಾವರಿ ಮತ್ತು ಕೃಷಿಯಲ್ಲಿ ಅಭಿವೃದ್ಧಿಗೆ ಇದು ಕಾರಣವಾಗಿದೆ. ತಂತ್ರಜ್ಞಾನ ಒಳ್ಳೆಯದಾದರೂ ನಿರುದ್ಯೋಗವನ್ನು ಸೃಷ್ಟಿಸುತ್ತಿದೆ. ಮಕ್ಕಳು ಮೊಬೈಲ್‌ ಫೋನ್, ಟ್ಯಾಬ್ಲೆಟ್, ಐಪ್ಯಾಡ್ ಬಳಸುವುದರಿಂದ ಅವರ ಆಸಕ್ತಿ ಕುಂಠಿತಗೊಳ್ಳುತ್ತದೆ. ವಿಜ್ಞಾನ ಖುಷಿಯೊಂದಿಗೆ ಆಘಾತವನ್ನು ಉಂಟು ಮಾಡುತ್ತಿದೆ’ ಎಂದರು.

ಪ್ರಾಂಶುಪಾಲ ಮಹೇಶ್ ದಳಪತಿ ಮಾತನಾಡಿ, ‘ವೈಚಾರಿಕ ಮನೋಭಾವ ಬೆಳೆಸಿಕೊಂಡು ವೈಜ್ಞಾನಿಕವಾಗಿ ಯೋಚಿಸಬೇಕು’ ಎಂದು ಹೇಳಿದರು.

ಸಹಾಯಕ ಪ್ರಾಧ್ಯಾಪಕಿ ವೀಣಾ ಕುಂಚೂರು, ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ದಂಡಿಕೆರೆ ನಾಗರಾಜ್‌ ಇದ್ದರು.

ಕಾವ್ಯಾ ಆರ್., ಸೋನಿಕಾ ಎನ್.ಆರ್. ಮತ್ತು ಕವಿತಾ ಡಿ. ಪ್ರಾರ್ಥಿಸಿದರು. ಮಂಜುಳಾ ಬಿ.ಕೆ. ಸ್ವಾಗತಿಸಿದರು. ವಸಂತಾ ಕೆ.ಆರ್. ವಂದಿಸಿದರು. ಭಾನುಪ್ರಿಯಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.