ADVERTISEMENT

ಎನ್‌ಐಆರ್‌ಎಫ್ ಶ್ರೇಯಾಂಕ: ಮೈಸೂರು ವಿ.ವಿಗೆ 33ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 11:02 IST
Last Updated 15 ಜುಲೈ 2022, 11:02 IST
ಮೈಸೂರು ವಿಶ್ವವಿದ್ಯಾಲಯ
ಮೈಸೂರು ವಿಶ್ವವಿದ್ಯಾಲಯ    

ಮೈಸೂರು: ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ (ಎನ್‌ಐಆರ್‌ಎಫ್) ವರದಿ ಆಧರಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 2022ನೇ ಸಾಲಿನಲ್ಲಿ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಮೈಸೂರು ವಿಶ್ವವಿದ್ಯಾಲಯವು 33ನೇ ಸ್ಥಾನ ಗಳಿಸಿದೆ.

ಎನ್‌ಐಆರ್‌ಎಫ್‌ ಸಮೀಕ್ಷೆಯ ಮೂಲಕ ನಡೆಸಿದ ರಾಷ್ಟ್ರಮಟ್ಟದ ಮೌಲ್ಯಮಾಪನವಿದು. ಬಾರಿ ಮೈಸೂರು ವಿ.ವಿಯು 27ನೇ ಸ್ಥಾನ ಪಡೆದಿತ್ತು. ಈ ಬಾರಿ ಪಟ್ಟಿಯಲ್ಲಿ ಮೇಲೇರಿದೆ.

‘ವಿಶ್ವವಿದ್ಯಾಲಯವು ತನ್ನ ಉತ್ತಮ ಸಾಧನೆಯಿಂದಾಗಿ ಅಗ್ರಸ್ಥಾನ ಗಳಿಸಿದೆ’ ಎಂದು ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ತಿಳಿಸಿದ್ದಾರೆ.

ADVERTISEMENT

ಇವುಗಳನ್ನೂಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.