ADVERTISEMENT

ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಸಹಯೋಗ: ಪಾರಂಪರಿಕ ಸಂಗೀತೋತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2022, 15:16 IST
Last Updated 31 ಆಗಸ್ಟ್ 2022, 15:16 IST
ವಿದ್ವಾನ್ ರಂಗಸ್ವಾಮಿ ಅವರ ತಂಡ ನಾದಸ್ವರ ವಾದನವನ್ನು ಪ್ರಸ್ತುತ ಪಡಿಸಿತು.
ವಿದ್ವಾನ್ ರಂಗಸ್ವಾಮಿ ಅವರ ತಂಡ ನಾದಸ್ವರ ವಾದನವನ್ನು ಪ್ರಸ್ತುತ ಪಡಿಸಿತು.   

ಮೈಸೂರು: ಇಲ್ಲಿನ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ಶ್ರೀ ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌ (ಎಸ್‌ಪಿವಿಜಿಎಂಸಿ) ವತಿಯಿಂದ, ಗಣೇಶ ಚತುರ್ಥಿ ದಿನವಾದ ಬುಧವಾರದಿಂದ 61ನೇ ‘ಪಾರಂ ಪರಿಕ ಸಂಗೀತೋತ್ಸವ’ ಆರಂಭವಾಯಿತು.

ಬುಧವಾರ ಮಧ್ಯಾಹ್ನ 1ಕ್ಕೆ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ಸಂಜೆ ವಿದ್ವಾನ್ ರಂಗಸ್ವಾಮಿ ಅವರ ತಂಡ ನಾಗಸ್ವರ ವಾದನವನ್ನು ಪ್ರಸ್ತುತ ಪಡಿಸಿತು.

ಅರ್ಚಕ ಶಶಿಧರ ಗಣಪನ ಮೂರ್ತಿಗೆ ಪೂಜೆ ಸಲ್ಲಿಸಿದರು

ಸೆ.1ರಂದು ಸಂಜೆ 6ಕ್ಕೆ ‘ದಿ ಪ್ರಿಂಟರ್ಸ್‌ ಮೈಸೂರು ಪ್ರೈವೇಟ್‌ ಲಿಮಿಟೆಡ್‌’ ನಿರ್ದೇಶಕರಾದ ಕೆ.ಎನ್‌.ಶಾಂತಕುಮಾರ್‌ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಟ್ರಸ್ಟ್‌ ಅಧ್ಯಕ್ಷ ಉದ್ಯಮಿ ಜಗನ್ನಾಥ ಶೆಣೈ, ಪೋಷಕ ವಾಸು ಉಪಸ್ಥಿತರಿರಲಿದ್ದಾರೆ.
‘ಸೆ.11ರವರೆಗೆ ನಿತ್ಯ ಸಂಜೆ 5.30ರಿಂದ 6.30ರವರೆಗೆ ಕ್ಕೆ ಸಂಗೀತ ಕಾರ್ಯಕ್ರಮಗಳು ಇವೆ. ಅದಕ್ಕೂ ಮುನ್ನ ಗಮಕ ಗಾಯನ, ಕಾವ್ಯವಾಚನ ನಡೆಯಲಿದೆ’ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಸಿ.ಆರ್.ಹಿಮಾಂಶು 'ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

ಸೆ.1ರ ಸಂಜೆ 6.45ಕ್ಕೆ ವಿದ್ವಾನ್‌ ಟಿ.ಎಂ.ಕೃಷ್ಣ ಅವರ ಗಾಯನವಿದೆ. 2ರಂದು ಅಕ್ಕರೈ ಶುಭಲಕ್ಷ್ಮಿ, ಅಕ್ಕರೈ ಸ್ವರ್ಣಲತಾ ಅವರ ದ್ವಂದ್ವ ಗಾಯನ, 3ರಂದು ವಿದ್ವಾನ್ ಮಲ್ಲಾಡಿ ಸಹೋದರರಿಂದ ದ್ವಂದ್ವ ಗಾಯನ, 4ರಂದು ವಿದ್ವಾನ್‌ ಅನಿಲ್‌ ಶ್ರೀನಿವಾಸನ್‌– ಪಂಡಿತ್‌ ಪ್ರವೀಣ್‌ ಗೋಡ್ಖಿಂಡಿ ಅವರ ಪಿಯಾನೊ– ಬಾನ್ಸುರಿ ಜುಗಲ್‌ಬಂದಿ, 5ರಂದು ಅಭಿಷೇಕ್‌ ರಘುರಾಂ ಗಾಯನ, 6ರಂದು ಜಯಂತಿ ಕುಮರೇಶ್‌ ಅವರ ವೀಣಾ ವಾದನವಿದೆ’ ಎಂದರು.

‘7ರಂದು ಭಾರ್ಗವಿ ವೆಂಕಟರಾಮ್‌, 8ರಂದು ವಾರಿಜಾಶ್ರೀ ವೇಣುಗೋಪಾಲ್‌ ಅವರ ಗಾಯನವಿದೆ. 9ರಂದು ಲಾಲ್‌ಗುಡಿ ಜಿಜೆಆರ್‌ ಕೃಷ್ಣನ್‌, ವಿಠ್ಠಲ್‌ ಮೂರ್ತಿ ವಯಲಿನ್ ವಾದನ, 10ರಂದು ಸಿಕ್ಕಿಲ್‌ ಆರ್‌. ಗುರುಚರಣ್‌ ಹಾಗೂ 11ರಂದು ಸಂದೀಪ್‌ ನಾರಾಯಣ್‌ ಅವರ ಗಾಯನವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.