ADVERTISEMENT

ಕ್ರೈಸ್ಟ್ ಕಾಲೇಜಿನಲ್ಲಿ ‘ಸೈಕ್ವೆಸ್ಟ್’ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 4:03 IST
Last Updated 7 ಫೆಬ್ರುವರಿ 2026, 4:03 IST
ಮೈಸೂರಿನ ಕ್ರೈಸ್ಟ್ ಕಾಲೇಜಿನ ಮನಃಶಾಸ್ತ್ರ ವಿಭಾಗದ ವತಿಯಿಂದ ಈಚೆಗೆ ‘ಸೈಕ್ವೆಸ್ಟ್’ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು
ಮೈಸೂರಿನ ಕ್ರೈಸ್ಟ್ ಕಾಲೇಜಿನ ಮನಃಶಾಸ್ತ್ರ ವಿಭಾಗದ ವತಿಯಿಂದ ಈಚೆಗೆ ‘ಸೈಕ್ವೆಸ್ಟ್’ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು   

ಮೈಸೂರು: ನಗರದ ಕ್ರೈಸ್ಟ್ ಕಾಲೇಜಿನ ಮನಃಶಾಸ್ತ್ರ ವಿಭಾಗವು ‘ಲೈಂಗಿಕ ಸಮಸ್ಯೆಯ ವಿವಿಧ ಮುಖಗಳ ಅನಾವರಣ’ ಕುರಿತು ‘ಸೈಕ್ವೆಸ್ಟ್’ ಶೀರ್ಷಿಕೆಯಡಿ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಇತ್ತೀಚೆಗೆ ಏರ್ಪಡಿಸಿತ್ತು.

ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಪ್ರೊ. ಟಿ.ಎಸ್. ಸತ್ಯನಾರಾಯಣ ರಾವ್ ಮಾತನಾಡಿ, ‘ಪ್ರೀತಿ ಮತ್ತು ಆಕರ್ಷಣೆಯ ಪ್ರಭಾವ, ಪುರುಷರು ಮತ್ತು ಮಹಿಳೆಯರ ಮಿದುಳಿನ ಕಾರ್ಯವೈಖರಿಯಲ್ಲಿನ ವ್ಯತ್ಯಾಸಗಳು, ಜೀವನದ ವಿವಿಧ ಹಂತಗಳಲ್ಲಿ ಲೈಂಗಿಕತೆಯ ಮಹತ್ವ, ಸಂವೇದನಾತ್ಮಕತೆ, ಪ್ರೀತಿ ಮತ್ತು ಆಂತರಿಕ ಸಂಬಂಧಗಳ ವಿವಿಧ ಆಯಾಮಗಳನ್ನು ವಿವರಿಸಿದರು.

ಪ್ರಾಂಶುಪಾಲ ಫಾದರ್ ಜಿಂಟೋ ಜೋಸ್ ಅಧ್ಯಕ್ಷತೆ ವಹಿಸಿದ್ದರು. ಪೋಸ್ಟರ್ ರಚನಾ ಸ್ಪರ್ಧೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ADVERTISEMENT

ಸಮಾರೋಪ ಸಮಾರಂಭದಲ್ಲಿ ಉಪಪ್ರಾಂಶುಪಾಲ ಫಾದರ್ ರೇಜೋ ಜೇಕಬ್ ಹಾಗೂ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಜಾನ್ಸನ್ ಡಬ್ಲ್ಯೂ. ಎಸ್. ಉಪಸ್ಥಿತರಿದ್ದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. 

ಚರ್ಚಾ ಸ್ಪರ್ಧೆಯಲ್ಲಿ ಜೆಎಸ್‌ಎಸ್ ಎಎಚ್‌ಇಆರ್ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡರೆ, ಪೋಸ್ಟರ್ ರಚನಾ ಸ್ಪರ್ಧೆಯಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.