ADVERTISEMENT

ವಾಲಿಬಾಲ್, ಥ್ರೋ ಬಾಲ್ ಟೂರ್ನಿ: ಮರಿಮಲ್ಲಪ್ಪ, ಜೆಎಸ್‌ಎಸ್ ಕಾಲೇಜಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 4:04 IST
Last Updated 22 ಆಗಸ್ಟ್ 2025, 4:04 IST
ಬಾಲಕರ ವಾಲಿಬಾಲ್ ಟೂರ್ನಿ ವಿಜೇತ ಮರಿಮಲ್ಲಪ್ಪ ಕಾಲೇಜು ತಂಡಕ್ಕೆ ಫಾ. ಲೂರ್ದ್‌ ಪ್ರಸಾದ್‌ ಜೋಸೆಫ್ ಬಹುಮಾನ ವಿತರಿಸಿದರು
ಬಾಲಕರ ವಾಲಿಬಾಲ್ ಟೂರ್ನಿ ವಿಜೇತ ಮರಿಮಲ್ಲಪ್ಪ ಕಾಲೇಜು ತಂಡಕ್ಕೆ ಫಾ. ಲೂರ್ದ್‌ ಪ್ರಸಾದ್‌ ಜೋಸೆಫ್ ಬಹುಮಾನ ವಿತರಿಸಿದರು   

ಮೈಸೂರು: ಮರಿಮಲ್ಲಪ್ಪ ಪಿ.ಯು ಕಾಲೇಜು ತಂಡವು ಗುರುವಾರ ಸಂತ ಫಿಲೋಮಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಿ.ಯು ಕಾಲೇಜುಗಳ ತಾಲ್ಲೂಕು ಮಟ್ಟದ ಬಾಲಕರ ವಾಲಿಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿಯಿತು. ಬಾಲಕಿಯರ ಥ್ರೋಬಾಲ್‌ನಲ್ಲಿ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜು ತಂಡವು ಅಗ್ರ ಪ್ರಶಸ್ತಿ ಪಡೆಯಿತು.

ವಾಲಿಬಾಲ್‌ ಟೂರ್ನಿಯ ಫೈನಲ್‌ನಲ್ಲಿ ಮರಿಮಲ್ಲಪ್ಪ ಕಾಲೇಜು 21–17, 16–21, 15–12 ರಿಂದ ದಕ್ಷ ಪಿ.ಯು. ಕಾಲೇಜು ತಂಡವನ್ನು ಮಣಿಸಿತು. ಲಕ್ಷ್ಮಿ ಹಯಗ್ರೀವ ಕಾಲೇಜು ತೃತೀಯ ಸ್ಥಾನ ಪಡೆಯಿತು.

ಬಾಲಕಿಯರ ಥ್ರೋಬಾಲ್ ಫೈನಲ್‌ನಲ್ಲಿ ಜೆಎಸ್‌ಎಸ್ ಕಾಲೇಜು ತಂಡವು 21–14 ಅಂತರದಲ್ಲಿ ಮರಿಮಲ್ಲಪ್ಪ ತಂಡವನ್ನು ಮಣಿಸಿತು. ಟೆರೇಷಿಯನ್‌ ಕಾಲೇಜು ತೃತೀಯ ಸ್ಥಾನ ಪಡೆಯಿತು.

ADVERTISEMENT

ವಿಜೇತರಿಗೆ ಸಂತ ಫಿಲೋಮಿನ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಫಾ. ಲೂರ್ದ್‌ ಪ್ರಸಾದ್‌ ಜೋಸೆಫ್ ಬಹುಮಾನ ವಿತರಿಸಿದರು.

ಪಿ.ಯು ವಿಭಾಗದ ಪ್ರಾಚಾರ್ಯ ಸುನೀಲ್ ಡಿಸೋಜ, ಪದವಿ ವಿಭಾಗದ ಪ್ರಾಚಾರ್ಯ ರವಿ ಸಲ್ಡಾನ್ಹ, ದೈಹಿಕ ಶಿಕ್ಷಣ ನಿರ್ದೇಶಕ ಮುರಳೀಧರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.