
ಪ್ರೊ.ಪುರುಷೋತ್ತಮ ಬಿಳಿಮಲೆ
ಮೈಸೂರು: ‘ಯಕ್ಷಗಾನದ ಒಳಗೆ ಎಷ್ಟೋ ಬಾರಿ ಹೋಮೊಸೆಕ್ಸ್ (ಸಲಿಂಗಕಾಮ) ಬೆಳಿತದೆ’ ಎಂದು ಪ್ರೊ.ಪುರುಷೋತ್ತಮ ಬಿಳಿಮಲೆ ಹೇಳಿದರು.
‘ಯಕ್ಷಗಾನದ ಮೇಳದ ಸಲುವಾಗಿ ಆರು ತಿಂಗಳ ಕಾಲ ಮನೆಯಿಂದ ದೂರ ಇರುವ ಕಲಾವಿದರ ಕಾಮ ಹೆಂಗಿರುತ್ತದೆ? ಯಕ್ಷಗಾನದ ಒಳಗಡೆ ಅದು ಅನಿವಾರ್ಯ ಮತ್ತು ಸ್ತ್ರೀ ವೇಷಧಾರಿಗಳಿಗೆ ಹೆಚ್ಚು ಒತ್ತಡವಿರುತ್ತದೆ’ ಎಂದರು.
‘ಸ್ತ್ರೀವೇಷಧಾರಿಗಳ ಮೇಲೆ ಇತರೆ ಕಲಾವಿದರ ಕಣ್ಣಿರುತ್ತದೆ. ಇದು ಕಲಾವಿದರ ನಡುವಿನ ಸಂಬಂಧ. ಸ್ತ್ರೀವೇಷಧಾರಿ ಅದನ್ನು ನಿರಾಕರಿಸಿದರೆ ಮರು ದಿವಸ ಭಾಗವತರು ಅವನಿಗೆ ಹೆಚ್ಚು ಪದ್ಯ ಕೊಡುವುದಿಲ್ಲ. ಇದು ಬದುಕಿನ ಪ್ರಶ್ನೆ’ ಎಂದರು.
‘ಕಲೆ, ದೈಹಿಕ ಕಾಮನೆಗಳು ರಂಗಭೂಮಿಯ ಎದುರು ಕಾಣುವ ಲೋಕಕ್ಕಿಂತ ಭಿನ್ನವಾಗಿರುವ ಕುರಿತು ವಿದ್ವಾಂಸರು ತಿಳಿದು, ಅರ್ಥಮಾಡಿಕೊಂಡು, ಯಾರಿಗೂ ತೊಂದರೆ, ನೋವಾಗದಂತೆ ಬರೆದರೆ ಜಾನಪದಕ್ಕೆ ಹೊಸ ಆಯಾಮ ಬರುತ್ತದೆ. ಈ ಅರ್ಥದಲ್ಲಿ ‘ನಾವು ಕೂಗುವ ಕೂಗು’ ತುಂಬ ಸಂತೋಷ ಕೊಟ್ಟ ಕೃತಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.