ADVERTISEMENT

ಮೈಸೂರು: ಮಸೀದಿ ಮುಂದೆ ರಾಮನವಮಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 19:31 IST
Last Updated 9 ಏಪ್ರಿಲ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ‘ರಾಷ್ಟ್ರೀಯ ಹಿಂದೂ ಸಮಿತಿಹಾಗೂ ಸುಜೀವ್ ಸಂಸ್ಥೆಯು ಏಪ್ರಿಲ್ 10ರಂದು ಸಂಜೆ 4.30ಕ್ಕೆ ಇಲ್ಲಿನ ಮೀನಾ ಬಜಾರ್‌ನ ಆಜ್ಹಂ ಮಸೀದಿ ಮುಂಭಾಗ ರಾಮನವಮಿ ಆಚರಿಸಲಿದೆ’ ಎಂದು ಸಮಿತಿಯ ಅಧ್ಯಕ್ಷ ವಿಕಾಸ್ ಶಾಸ್ತ್ರಿ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಮಾನತೆಯ ಸಂದೇಶ ಸಾರಲು ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮ ದವರು ಒಟ್ಟಾಗಿ ರಾಮನವಮಿ ಆಚರಿಸ ಲಿದ್ದಾರೆ. ರಾಮದೇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಜ್ಜಿಗೆ, ಪಾನಕ ಹಾಗೂ ಮುಸ್ಲಿಮರ ಇಫ್ತಾರ್‌ ಕೂಟ ಕ್ಕಾಗಿ ಹಣ್ಣು, ಸಮೋಸ, ಡ್ರೈಫ್ರೂಟ್ಸ್‌ಗಳನ್ನು ವಿತರಿಸಲಾಗುವುದು’ ಎಂದು ಹೇಳಿದರು.

‘ಎರಡೂ ಧರ್ಮದವರ ಮಧ್ಯೆ ಸದ್ಯದ ಪರಿಸ್ಥಿತಿಯಲ್ಲಿ ಉಂಟಾಗಿರುವ ಬಿರುಕನ್ನು ಮುಚ್ಚಲು ಹಾಗೂ ದೇಶದ ಹಿತಕ್ಕಾಗಿ ಎಲ್ಲರೂ ಒಗ್ಗೂಡಿ ಮುಂದೆ ನಡೆಯಲು ಭಾವೈಕ್ಯದ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

ADVERTISEMENT

‘ಕೋಟೆ ಆಂಜನೇಯಸ್ವಾಮಿ ದೇಗುಲದ ಸಮೀಪವಿರುವ ರಾಮ ಮಂದಿರ ಶಿಥಿಲಾವಸ್ಥೆ ತಲುಪಿದೆ. ಇಲ್ಲಿನ ರಾಮದೇವರ ಮೂಲ ವಿಗ್ರಹವನ್ನು ಚೀಲದಲ್ಲಿ ಮುಚ್ಚಿಡಲಾಗಿದೆ‌. ಉತ್ಸವಮೂರ್ತಿಗಷ್ಟೇ ಪೂಜೆ ಮಾಡಲಾಗುತ್ತಿದೆ. ಈ ದೇಗುಲದ ದುರಸ್ತಿಗೆ ಮುಸ್ಲಿಮರೂ ಕೈಜೋಡಿಸುತ್ತೇವೆ ಎಂದು ಹೇಳಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.