ಮೈಸೂರು: ‘ಚೀನಾ, ಪಾಕಿಸ್ತಾನ ಗಡಿಭಾಗದಲ್ಲಿ ನಮ್ಮ ವೀರ ಯೋಧರು ಹೋರಾಡಲು ಸಂಗೊಳ್ಳಿ ರಾಯಣ್ಣ ಪ್ರೇರಣೆ’ ಎಂದು ನಿವೃತ್ತ ಯೋಧ ಬಿದ್ದಪ್ಪ ಹೇಳಿದರು.
ಮೈಸೂರು ಕನ್ನಡ ವೇದಿಕೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೊಳ್ಳಿ ರಾಯಣ್ಣರ ಹೋರಾಟದ ಬದುಕಿನ ಕುರಿತು ಪ್ರಾಧ್ಯಾಪಕ ಹರದನಹಳ್ಳಿ ನಂಜುಂಡಸ್ವಾಮಿ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರಗಳ ಸಾಧಕರಾದ ಶ್ರೀಷಾ ಭಟ್, ಲೋಕೇಶ್ (ಸಮಾಜ ಸೇವೆ), ಬಿದ್ದಪ್ಪ (ನಿವೃತ್ತ ಯೋಧ), ರವಿ (ಯೋಧ), ಎನ್. ಪ್ರಜ್ವಲ್ (ಪತ್ರಕರ್ತ), ಪುರುಷೋತ್ತಮ್ (ಗಾಯಕ), ಡಾ. ಸೌಮ್ಯಾ ಮೂರ್ತಿ (ಔಷಧ ತಜ್ಞೆ), ರೇಖಾ ಮನಶಾಂತಿ (ಮನೋವೈದ್ಯೆ), ವಿಜಯಶ್ರೀ (ಸಂಗೀತ), ಎಚ್.ಕೆ. ಕೋಮಲಾ (ಸೌಂದರ್ಯ ತಜ್ಞೆ), ಭಾರತಿ ಶಿರೂರು (ಕ್ರೀಡೆ), ಎಸ್. ಪ್ರಿಯಾ (ಸುಗಮ ಸಂಗೀತ) ಅವರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.