ADVERTISEMENT

ಹುಣಸೂರು: ‘ರೋಟರಿ ಇನ್ನರ್‌ ವೀಲ್‌ ಸ್ವಾರ್ಥರಹಿತ ಸೇವೆ’

ಜಿಲ್ಲಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 3:54 IST
Last Updated 17 ನವೆಂಬರ್ 2025, 3:54 IST
ಹುಣಸೂರು ನಗರದ ರೋಟರಿ ಭವನದಲ್ಲಿ ಬುಧವಾರ ರೋಟರಿ ಇನ್ನರ್‌ ವೀಲ್‌ ಜಿಲ್ಲಾ ಗವರ್ನರ್‌ ಅಧಿಕೃತ ಭೇಟಿಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಹಾಗೂ ರೋಟರಿ ಸಂಸ್ಥೆ ಜಿಲ್ಲಾ ಮಾಜಿ ಅಸಿಸ್ಟೆಂಟ್‌ ಗೌರ್ನರ್‌ ಧರ್ಮಾಪುರ ನಾರಾಯಣ ಅವರನ್ನು ಜಿಲ್ಲಾ ಗೌವರ್ನರ್‌ ಶಬರಿ ಕಡಿದಾಳು ಗೌರವಿಸಿದರು
ಹುಣಸೂರು ನಗರದ ರೋಟರಿ ಭವನದಲ್ಲಿ ಬುಧವಾರ ರೋಟರಿ ಇನ್ನರ್‌ ವೀಲ್‌ ಜಿಲ್ಲಾ ಗವರ್ನರ್‌ ಅಧಿಕೃತ ಭೇಟಿಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಹಾಗೂ ರೋಟರಿ ಸಂಸ್ಥೆ ಜಿಲ್ಲಾ ಮಾಜಿ ಅಸಿಸ್ಟೆಂಟ್‌ ಗೌರ್ನರ್‌ ಧರ್ಮಾಪುರ ನಾರಾಯಣ ಅವರನ್ನು ಜಿಲ್ಲಾ ಗೌವರ್ನರ್‌ ಶಬರಿ ಕಡಿದಾಳು ಗೌರವಿಸಿದರು   

ಹುಣಸೂರು: ರೋಟರಿ ಇನ್ನರ್‌ ವೀಲ್‌ ವಿಶ್ವದಲ್ಲಿ ಅತಿ ದೊಡ್ಡ ಸಂಖ್ಯೆಯ ಸದಸ್ಯರನ್ನು ಹೊಂದಿ ಸಾಮಾಜಿಕ ಕಳಕಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಘಟನೆ ಎಂದು ಇನ್ನರ್‌ ವೀಲ್‌ 318 ಜಿಲ್ಲಾ ಗೌರ್ನರ್‌ ಶಬರಿ ಕಡಿದಾಳು ಹೇಳಿದರು.

ನಗರದ ರೋಟರಿ ಭವನದಲ್ಲಿ ಬುಧವಾರ ಇನ್ನರ್‌ ವೀಲ್‌ ಜಿಲ್ಲಾಧ್ಯಕ್ಷರ ಅಧಿಕೃತ ಭೇಟಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಇನ್ನರ್‌ ವೀಲ್‌ ರೋಟರಿ ಸಂಸ್ಥೆಯ ಅಂಗವಾಗಿದ್ದು, ಮಹಿಳೆಯರು ಈ ಸಂಘಟನೆಯಲ್ಲಿ ತೊಡಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದೇವೆ. ಇನ್ನರ್‌ ವೀಲ್‌ ಸಂಸ್ಥೆ ಶಿಕ್ಷಣ, ಆರೋಗ್ಯ, ಸಮುದಾಯದ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿದೆ ಎಂದರು. 

ಇನ್ನರ್ ವೀಲ್‌ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸಿ ಒಟ್ಟು 15 ವಲಯಗಳಲ್ಲಿ 27 ಜಿಲ್ಲೆಗಳಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಪ್ರಧಾನ ಕಚೇರಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿದ್ದು ವಿಶ್ವದ 99 ರಾಷ್ಟ್ರಗಳಲ್ಲಿ ಸಾರ್ವಜನಿಕ ಸೇವೆಯಲ್ಲಿ ಗುರುತಿಸಿಕೊಂಡಿದೆ ಎಂದರು.

ADVERTISEMENT

ಹುಣಸೂರು ಇನ್ನರ್‌ ವೀಲ್‌ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ವಿಶ್ವನಾಥ್‌ ಮಾತನಾಡಿ, ಸಾಮಾಜಿಕ ಕಳಕಳಿ ಹೊಂದಿರುವ ಸಂಘಟನೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ವಾರ್ಥರಹಿತವಾಗಿ ಸ್ಪಂದಿಸಿ ಸಾಮಾಜಿಕ ಅಭಿವೃದ್ಧಿಯಲ್ಲಿ ತೊಡಗಿದೆ. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ ಸರ್ಕಾರಿ ಶಾಲೆಗೆ ಶುದ್ಧ ಕುಡಿಯುವ ನೀರು, ಕ್ರೀಡೆಗೆ ಉತ್ತೇಜಿಸುವ ದೃಷ್ಟಿಯಿಂದ ಕ್ರೀಡಾಕೂಟದಲ್ಲಿ ಗೆದ್ದವರಿಗೆ ಬಹುಮಾನ ಒಳಗೊಂಡಂತೆ ಇತರೆ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದೇವೆ ಎಂದರು.

ಗೌರವ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಮತ್ತು ಜಿಲ್ಲಾ ರೋಟರಿ ಮಾಜಿ ಅಸಿಸ್ಟೆಂಟ್‌ ಗೌವರ್ನರ್ ಆದ ಧರ್ಮಾಪುರ ನಾರಾಯಣ್‌ ಅವರನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ತೇನ್‌ ಮೋಳಿ ತಂಗಮಾರಿಯಪ್ಪನ್‌ ಕ್ಲಬ್‌ ವಾರ್ಷಿಕ ವರದಿ ಸಭೆಗೆ ಓದಿ ತಿಳಿಸಿದರು. ಮಾಜಿ ಅಧ್ಯಕ್ಷೆ ಸ್ಮಿತ ದಯಾನಂದ್‌, ಡಾ.ರಾಜೇಶ್ವರಿ, ಡಾ.ಸಂಗೀತ, ಶಿವಕುಮಾರಿ ಮಾತನಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ಕೃಷ್ಣಕುಮಾರ್‌, ಮಹೇಶ್‌, ಜಯಲಕ್ಷ್ಮಿ, ಡಾ.ಮಂಜುಳ, ದೀಪಾ. ಸುಜಾತ, ಅಂಜು ಭಾಗ್ಯ ಮತ್ತು ರೋಟರಿ ಶಾಲಾ ಶಿಕ್ಷಕಿಯರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.