ADVERTISEMENT

ಸಂಕ್ರಾಂತಿಗೆ ಮೈಸೂರು – ಟ್ಯುಟಿಕಾರನ್‌ ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 7:31 IST
Last Updated 10 ಜನವರಿ 2026, 7:31 IST
   

ಮೈಸೂರು: ‘ಸಂಕ್ರಾಂತಿ, ಪೊಂಗಲ್‌ ಹಬ್ಬದ ಅಂಗವಾಗಿ ತಮಿಳುನಾಡಿಗೆ ಹೆಚ್ಚು ಜನರು ಪ್ರಯಾಣಿಸುವುದರಿಂದ ಮೈಸೂರು – ಟ್ಯುಟಿಕಾರನ್‌ (ತೂತುಕುಡಿ) ನಡುವೆ ವಿಶೇಷ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

06283 ಮೈಸೂರು– ಟ್ಯುಟಿಕಾರನ್‌ ಎಕ್ಸ್‌ಪ್ರೆಸ್‌ ವಿಶೇಷ ರೈಲು ಜ. 9 ಮತ್ತು 13ರಂದು (ಶುಕ್ರವಾರ ಮತ್ತು ಮಂಗಳವಾರ) ಮೈಸೂರಿನಿಂದ ಸಂಜೆ 6.35ಕ್ಕೆ ಹೊರಡಲಿದ್ದು, ಮರುದಿನ ಬೆಳಿಗ್ಗೆ 11ಕ್ಕೆ ತೂತುಕುಡಿ ತಲುಪಲಿದೆ.

06284 ಟ್ಯುಟಿಕಾರನ್‌ –ಮೈಸೂರು ಎಕ್ಸ್‌ಪ್ರೆಸ್‌ ವಿಶೇಷ ರೈಲು ಜ.10 ಮತ್ತು 14ರಂದು (ಶನಿವಾರ ಮತ್ತು ಬುಧವಾರ) ಮಧ್ಯಾಹ್ನ 2ಕ್ಕೆ ಹೊರಡಲಿದ್ದು, ಮರುದಿನ ಬೆಳಿಗ್ಗೆ 7.45ಕ್ಕೆ ಮೈಸೂರು ತಲುಪಲಿದೆ ಎಂದು ಹೇಳಿದ್ದಾರೆ.

ADVERTISEMENT

ಈ ರೈಲುಗಳು ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಹೊಸೂರು, ಧರ್ಮಪುರಿ, ಸೇಲಂ ಜಂಕ್ಷನ್, ನಾಮಕ್ಕಲ್, ಕರೂರು ಜಂಕ್ಷನ್, ದಿಂಡಿಗಲ್ ಜಂಕ್ಷನ್, ಮದುರೈ ಜಂಕ್ಷನ್, ವಿರುದ್ಧ್‌ನಗರ ಜಂಕ್ಷನ್, ಸತೂರು, ಕೋವಿಲ್‌ಪಟ್ಟಿ ಮತ್ತು ಟುಟಿಮೇಲೂರ್ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.

ಈ ವಿಶೇಷ ರೈಲು ಒಟ್ಟು 19 ಕೋಚ್‌ಗಳನ್ನು ಹೊಂದಿದೆ. ಎಸಿ ಟು ಟೈಯರ್ – 3, ಎಸಿ ತ್ರಿ ಟೈಯರ್ – 6, ಸ್ಲೀಪರ್ ಕ್ಲಾಸ್ – 8, ಎಸ್ಎಲ್ಆರ್/ಡಿ – 2 ಬೋಗಿಗಳಿವೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.