ಸಾಂದರ್ಭಿಕ ಚಿತ್ರ
ಮೈಸೂರು: ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಯ ಎರಡನೇ ತಂಡ ಗುರುವಾರ ಬಂದಿಳಿಯಲಿವೆ.
'ಅರಮನೆಯಲ್ಲಿ ಸಂಜೆ 5ಕ್ಕೆ 'ಮಹೇಂದ್ರ' ನೇತೃತ್ವದ 5 ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತಿಸಲಾಗುತ್ತಿದೆ' ಎಂದು ಡಿಸಿಎಫ್ ಐ.ಬಿ.ಪ್ರಭುಗೌಡ ತಿಳಿಸಿದರು.
ಮತ್ತಿಗೋಡು ಆನೆ ಶಿಬಿರದ ಮಹೇಂದ್ರ (41), ದುಬಾರೆ ಶಿಬಿರದ ಪ್ರಶಾಂತ (51), ಸುಗ್ರೀವ (42), ರಾಮಾಪುರ ಆನೆ ಶಿಬಿರದ ಲಕ್ಷ್ಮಿ (23) ಹಾಗೂ ಹಿರಣ್ಯ (47) ಆನೆಗಳು ಎರಡನೇ ತಂಡದಲ್ಲಿವೆ.
ಈಗಾಗಲೇ ಅಂಬಾರಿ ಆನೆ 'ಅಭಿಮನ್ಯು' ನೇತೃತ್ವದ ಮೊದಲ ತಂಡದ ಭೀಮ, ಧನಂಜಯ, ಗೋಪಿ, ವರಲಕ್ಷ್ಮಿ, ಲಕ್ಷ್ಮಿ, ಕಂಜನ್, ರೋಹಿತ್ ಹಾಗೂ ಇದೇ ಮೊದಲ ಬಾರಿ ಭಾಗವಹಿಸುತ್ತಿರುವ ‘ಏಕಲವ್ಯ' ಆನೆಗಳಿಗೆ ವಿವಿಧ ತಾಲೀಮು ನೀಡಲಾಗುತ್ತಿದ್ದು, ನಗರದ ವಾತಾವರಣಕ್ಕೆ ಹೊಂದಿಕೊಂಡಿವೆ.
ನಿತ್ಯ ಅರಮನೆಯಿಂದ ಬನ್ನಿಮಂಟಪದವರೆಗೆ ನಡಿಗೆ ಹಾಗೂ ಭಾರ ಹೊರುವ ತಾಲೀಮು ನೀಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.