ADVERTISEMENT

ಪರಿಶ್ರಮದ ಓದಿನಿಂದ ಉತ್ತಮ ಬದುಕು ರೂಪಿಸಿ: ಎಚ್.ವಿ.ಉದಯಕುಮಾರ್

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 5:33 IST
Last Updated 12 ಜನವರಿ 2026, 5:33 IST
<div class="paragraphs"><p> ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಮಾಜ ಸೇವಕ ನಾರಿ ಟ್ರಸ್ಟ್ ಅಧ್ಯಕ್ಷ ಸಿ.ಎಸ್.ಮುರಳೀಧರ, ನಿವೃತ್ತ ಪ್ರಾಂಶುಪಾಲ ಎಂ.ಸೋಮಣ್ಣ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ವಿ.ಉದಯಕುಮಾರ್ ಅವರನ್ನು ಸನ್ಮಾನಿಸಲಾಯಿತು.</p></div>

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಮಾಜ ಸೇವಕ ನಾರಿ ಟ್ರಸ್ಟ್ ಅಧ್ಯಕ್ಷ ಸಿ.ಎಸ್.ಮುರಳೀಧರ, ನಿವೃತ್ತ ಪ್ರಾಂಶುಪಾಲ ಎಂ.ಸೋಮಣ್ಣ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ವಿ.ಉದಯಕುಮಾರ್ ಅವರನ್ನು ಸನ್ಮಾನಿಸಲಾಯಿತು.

   

ತಿ.ನರಸೀಪುರ: ದ್ವಿತೀಯ ಪಿಯುಸಿ ನಿಮ್ಮ ಭವಿಷ್ಯದ ಬದುಕಿನ ಮಾರ್ಗ ನಿರ್ಧರಿಸುವುದರಿಂದ ವಿದ್ಯಾರ್ಥಿಗಳು ಅಧ್ಯಯನ ದತ್ತ ಹೆಚ್ಚು ಗಮನಹರಿಸಿ ಉತ್ತಮ ಸಾಧನೆ ಮಾಡುವಂತೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ  ಎಚ್.ವಿ.ಉದಯಕುಮಾರ್  ಸಲಹೆ ನೀಡಿದರು.

ಪಟ್ಟಣದ ಹಳೇ ಸಂತೇಮಾಳದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಕಾಲೇಜು ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

ಪಿಯು ಹಂತ ಶೈಕ್ಷಣಿಕ ವ್ಯವಸ್ಥೆ ಯಲ್ಲಿ ಪ್ರಮುಖ ಘಟ್ಟ. ಇಲ್ಲಿ ನಾವು ಹೆಚ್ಚು ಜಾಗೃತರಾಗಿ ಎಚ್ಚರಿಕೆಯ ಹೆಜ್ಜೆ ಇಡಬೇಕು. ದ್ವಿತೀಯ ಪಿಯುಸಿ ಬಳಿಕ ಪದವಿ ಶಿಕ್ಷಣ ಪಡೆದು ತಮ್ಮ ಬದುಕು ರೂಪಿಸಿಕೊಳ್ಳಬೇಕಾದ ಜವಾಬ್ದಾರಿ ತಮ್ಮ ಮೇಲಿದೆ. ಶಿಕ್ಷಣ ವಿಷಯದ ಆಯ್ಕೆಯಲ್ಲಿ ವಿದ್ಯಾರ್ಥಿಗಳಿಗೆ ವಿವೇಚನೆ ಹೆಚ್ಚಿರಬೇಕು ಎಂದು ಸಲಹೆ ಮಾಡಿದರು.

ಸಂತೇಮಾಳ ಪ್ರದೇಶ ಶೈಕ್ಷಣಿಕ ಕೇಂದ್ರ ಪ್ರದೇಶವಾಗಿ ಅಭಿವೃದ್ಧಿ ಗೊಂಡಿದ್ದು,, ಪದವಿ ಪೂರ್ವ, ಪದವಿ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳ ಸಮುಚ್ಚಯದಿಂದ ಸಧೃಡಗೊಂಡಿದೆ.

ನಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಪದವಿ ಕೋರ್ಸುಗಳು ಸೇರಿದಂತೆ ಎಂ ಕಾಂ ಅಂತಹ ಸ್ನಾತಕೋತ್ತರ ಪದವಿ ಶಿಕ್ಷಣವೂ ಲಭ್ಯವಿದೆ. ಸುಸಜ್ಜಿತ ಕಟ್ಟಡ, ಪ್ರಯೋಗಾಲ ಹಾಗೂ ಗ್ರಂಥಾಲಯವು ಕೂಡ ಲಭ್ಯವಿದೆ. ದ್ವಿತೀಯ ಪಿಯು ಬಳಿಕ ಪದವಿ ಶಿಕ್ಷಣಕ್ಕೆ ಪಕ್ಕದಲ್ಲಿನ ಸರ್ಕಾರಿ ಕಾಲೇಜಿನಲ್ಲಿ ಪ್ರವೇಶಾತಿಯನ್ನು ಪಡೆಯಿರಿ. ಗುಣಮಟ್ಟದ ಶಿಕ್ಷಣ ನಮ್ಮ ಆದ್ಯತೆ ಯಾಗಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಿ.ಸಿ.ಲಿಂಗರಾಜು ಮಾತನಾಡಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯಲು ಪಿಯುಸಿ ಪ್ರಮುಖ ಹಂತ. ಇಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯಕ್ಕೆ ಭದ್ರ ಬುನಾದಿ ಆಗಬೇಕು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಗ್ರಾಮೀಣ ಪ್ರದೇಶಗಳ ಬಡವರು ಮತ್ತು ಮಧ್ಯಮ ವರ್ಗದ ಮಕ್ಕಳೇ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಹಾಗಾಗಿ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ವಿದ್ಯೆಯನ್ನು ಪಡೆದು ಪೋಷಕರು ಮತ್ತು ಬೋಧಕರಿಗೆ ಒಳ್ಳೆಯ ಹೆಸರನ್ನು ತರುವಂತೆ ಕೋರಿದರು.

ಸಮಾಜ ಸೇವಕರಾದ ನಾರಿ ಟ್ರಸ್ಟ್ ಅಧ್ಯಕ್ಷ ಸಿ.ಎಸ್. ಮುರಳಿಧರ್, ನಿವೃತ್ತ ಪ್ರಾಂಶುಪಾಲ ಎಂ.ಸೋಮಣ್ಣ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್.ವಿ. ಉದಯಕುಮಾರ್ ಸನ್ಮಾನಿಸಲಾಯಿತು. ಹಿರಿಯ ಉಪನ್ಯಾಸಕ ಎನ್.ಜವರಯ್ಯ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಗೀತ ಗಾಯನ ಹಾಗೂ ನೃತ್ಯಗಳ ಮೂಲಕ ಸಮಾರಂಭಕ್ಕೆ ಸಾಂಸ್ಕೃತಿಕ ಕಳೆ ತಂದರು.

ಉಪನ್ಯಾಸಕರಾದ ಸುಮಿತ್ರಮ್ಮ, ಡಾ.ಮಂಜುನಾಥ್, ವಿಠ್ಠಲ್ ತಮ್ಮಣ್ಣಿ, ರಘು, ಶಂಕರ್, ಸಿದ್ದಪ್ಪ, ಜಮುನಾಶ್ರೀ, ರೂಪಶ್ರೀ, ಶಿವರಂಜಿನಿ, ಸುಮಲತ, ಮೇಘ, ಕಾವ್ಯ, ಮೇಘ ಮಂದಾರ, ಶುಭಮಣಿ, ಮೀನಾಕ್ಷಿ, ನಂಜಮ್ಮಣ್ಣಿ, ರಾಜಶೇಖರ್ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.