ADVERTISEMENT

ಸೇವೆಗಾಗಿ ನಂಜನಗೂಡು ‘ಹಾಟ್‌ಸ್ಪಾಟ್‌’ಗೆ

ಕೊರೊನಾ ವಾರಿಯರ್ಸ್‌

ಡಿ.ಬಿ, ನಾಗರಾಜ
Published 1 ಜುಲೈ 2020, 10:58 IST
Last Updated 1 ಜುಲೈ 2020, 10:58 IST
ಡಾ.ಎಸ್‌.ಡಿ.ಕಲಾವತಿ
ಡಾ.ಎಸ್‌.ಡಿ.ಕಲಾವತಿ   

ಮೈಸೂರು: ನಂಜನಗೂಡಿನಲ್ಲಿ ಐದು ವರ್ಷ ತಾಲ್ಲೂಕು ವೈದ್ಯಾಧಿಕಾರಿಯಾಗಿದ್ದ ಡಾ.ಎಸ್‌.ಡಿ.ಕಲಾವತಿ, ಕೋವಿಡ್ ಸಂಕಷ್ಟ ಆರಂಭದ ಎರಡೂವರೆ ತಿಂಗಳ ಮುಂಚೆಯಷ್ಟೇ ಮೈಸೂರಿನ ಪೊಲೀಸ್‌ ತರಬೇತಿ ಕೇಂದ್ರದ ವೈದ್ಯಾಧಿಕಾರಿಯಾಗಿ ವರ್ಗವಾಗಿದ್ದರು.

ನಂಜನಗೂಡು ‘ಕೋವಿಡ್‌ ಹಾಟ್‌ಸ್ಪಾಟ್‌’ ಆದ ನಂತರ, ತಾವೇ ಹಿರಿಯ ಅಧಿಕಾರಿಗಳನ್ನು ಕೇಳಿಕೊಂಡು ಮತ್ತೆ ಅಲ್ಲಿಗೇ ನಿಯೋಜನೆಗೊಂಡರು.

‘ಅದಾಗಲೇ ಸಿಬ್ಬಂದಿ ಹೆದರಿದ್ದರು. ಅವರ ಆತಂಕ ದೂರ ಮಾಡಲು ಎಲ್ಲೆಡೆಯೂ ನಾನೇ ಮೊದಲು ಹೋಗಬೇಕಿತ್ತು. ಪರೀಕ್ಷಾ ಕೇಂದ್ರದ ಕಸ ಹೊಡೆದೆ. ಸೋಂಕಿತರ ತಟ್ಟೆ ತೆಗೆದೆ. ಜನರನ್ನು ನಿಯಂತ್ರಿಸದೇ ಅಂಜಿ ದೂರವಿರುತ್ತಿದ್ದ ಪೊಲೀಸರ ಜೊತೆ ಜಗಳ ಕೂಡ ಆಡಿದ್ದಿದೆ. ಖಾಸಗಿ ಆಸ್ಪತ್ರೆಯವರಿಗೆ ತುರ್ತು ಚಿಕಿತ್ಸೆ ನೀಡುವಂತೆ ಮನವಿ, ತಾಕೀತು ಎರಡೂ ಆದವು. ಹೀಗಾಗಿ ಅವರೊಂದಿಗೆ ನಿಷ್ಠುರವೂ ಆದೆ’ ಎಂದು ಎದುರಿಸಿದ ಆರಂಭಿಕ ಸವಾಲುಗಳನ್ನು ಬಿಡಿಸಿಟ್ಟರು.

ADVERTISEMENT

ಜಿಲ್ಲೆಯಲ್ಲಿ ಕೋವಿಡ್‌ ವಿರುದ್ಧದ ಮೊದಲ ಹಂತದ ಯಶಸ್ವೀ ಹೋರಾಟವನ್ನು ಮುಗಿಸಿ, ಇದೀಗ ಸೇವೆಗೆ ಮತ್ತೆ ಸಜ್ಜಾಗಿದ್ದಾರೆ.

‘ವಿಶೇಷ ಆರೈಕೆ ಅಗತ್ಯವಿರುವ ಮಗನಿದ್ದಾನೆ. ಆದರೆ, ಎರಡು ತಿಂಗಳು ಮನೆಗೆ ಹೋಗಲು ಹೊತ್ತು ಗೊತ್ತು ಇರಲಿಲ್ಲ. ಜಿಲ್ಲೆಯಲ್ಲಿ ಪ್ರಕರಣ ತಗ್ಗುತ್ತಿದ್ದಂತೆಯೇ ಬಿಡುಗಡೆಗೊಂಡು ಮೈಸೂರಿಗೆ ಬಂದಿದ್ದೇನೆ. ಪರಿಸ್ಥಿತಿ ಮತ್ತೆ ಬಿಗಡಾಯಿಸಿದರೆ, ಸೇವೆಗೆ ಸಿದ್ಧಳಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.