ADVERTISEMENT

ವೇಟ್‌ಲಿಫ್ಟಿಂಗ್‌: ಶೇಷಾದ್ರಿಪುರಂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 5:24 IST
Last Updated 24 ಆಗಸ್ಟ್ 2025, 5:24 IST
<div class="paragraphs"><p>ವೇಟ್‌ಲಿಫ್ಟಿಂಗ್‌ </p></div>

ವೇಟ್‌ಲಿಫ್ಟಿಂಗ್‌

   

ಪ್ರಾತಿನಿಧಿಕ ಚಿತ್ರ

ಪ್ರಜಾವಾಣಿ ವಾರ್ತೆ

ADVERTISEMENT

ಮೈಸೂರು: ಹೆಬ್ಬಾಳದ ಶೇಷಾದ್ರಿಪುರಂ ಪದವಿ ಕಾಲೇಜು ವಿದ್ಯಾರ್ಥಿಗಳು ಜೆಎಸ್‌ಎಸ್ ಎಸ್‌ಟಿಯು ಕ್ಯಾಂಪಸ್‌ನಲ್ಲಿ ಈಚೆಗೆ ನಡೆದ ‘ಅಸ್ಮಿತಿ’ ಎಎಸ್ಎಂ ಐಟಿಐ ಖೇಲೋ ಇಂಡಿಯಾ ಮಹಿಳೆಯರ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ.

48 ಕೆ.ಜಿ. ವಿಭಾಗದಲ್ಲಿ ಟಿ.ಎಲ್. ಸಿಂಚನಾ ಪ್ರಥಮ ಬಹುಮಾನ, ನಂದಿನಿ ದ್ವಿತೀಯ, 53 ಕೆ.ಜಿ. ವಿಭಾಗದಲ್ಲಿ ಎಂ. ಹರ್ಷಿತಾ ಪ್ರಥಮ, ಎಂ.ಪಿ. ದಾಕ್ಷಾಯಿಣಿ ತೃತೀಯ, 58 ಕೆ.ಜಿ. ವಿಭಾಗದಲ್ಲಿ ಆರ್. ಮನುಶ್ರೀ ಪ್ರಥಮ, 69 ಕೆ.ಜಿ. ವಿಭಾಗದಲ್ಲಿ ಎಂ. ಮೋನಿಕಾ ದ್ವಿತೀಯ, ಬಿ. ನಿಮಿಷಾ ತೃತೀಯ, 86 ಕೆ.ಜಿ. ವಿಭಾಗದಲ್ಲಿ ಸಿರಿ ತೃತೀಯ ಬಹುಮಾನ ಪಡೆದಿದ್ದಾರೆ.

ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳನ್ನು ಪ್ರಾಚಾರ್ಯರಾದ ಕೆ. ಸೌಮ್ಯ ಈರಪ್ಪ, ವೇಟ್‌ಲಿಫ್ಟಿಂಗ್‌ ತರಬೇತುದಾರ ಪ್ರೊ. ಗುರುಮೂರ್ತಿ ಭಟ್ ಹಾಗೂ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ನಾಗೇಂದ್ರ ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.