ಮೈಸೂರು: ನಗರದ ಎನ್.ಎ.ಯಶ್ವಂತ್ ಹಾಗೂ ಬೆಂಗಳೂರಿನ ಡಿ.ತ್ವಿಶಾ ಅವರು ಇಲ್ಲಿ ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಯ 17 ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್ ಆದರು. ಯಶ್ವಂತ್ 1 ಚಿನ್ನ, ಕಂಚು ಗೆದ್ದರೆ, ತ್ವಿಶಾ 6 ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.
ಸರಸ್ವತಿಪುರಂನ ವಿಶ್ವವಿದ್ಯಾಲಯದ ಈಜುಕೊಳದಲ್ಲಿ ‘ಮೈಸೂರು ಜಿಲ್ಲಾ ಈಜು ಸಂಸ್ಥೆ’ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ 100 ಮೀಟರ್ಸ್ ಫ್ರೀಸ್ಟೈಲ್ ವಿಭಾಗದಲ್ಲಿ ಯಶ್ವಂತ್, ಮೈಸೂರಿನ ನಿಖಿಲ್, ಮಂಗಳೂರಿನ ರೋನನ್ ಆ್ಯರನ್, ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ಡಿ.ತ್ವಿಶಾ, ಶ್ರೇಯಾ ಸಕ್ಸೇನಾ, ಹಾಸನದ ಮೊನಿಷಾ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು.
ಫಲಿತಾಂಶ: ಬಾಲಕಿಯರ ವಿಭಾಗ: 100 ಮೀಟರ್ಸ್ ಫ್ರೀಸ್ಟೈಲ್: ನಿರುಪಮಾ ವಿಜಯ್ ಗಣೇಶ್ (ಬೆಂಗಳೂರು)–1, ನಮ್ರತಾ (ಮೈಸೂರು)–2, ಯಾಸ್ಮಾ–3. 200 ಮೀಟರ್ಸ್ ಐಎಂ: ಆರ್ನಾ ಹೆಗಡೆ–1, ನಮ್ರತಾ–2, ಹಿತಾ–3. 50 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್: ತ್ವಿಶಾ–1, ಧಾನ್ವಿ–2, ನಯನಾ–3. 50 ಮೀಟರ್ಸ್ ಬ್ಯಾಕ್ ಸ್ಟ್ರೋಕ್: ಶ್ರೇಯಾ ಸಕ್ಸೇನಾ–1, ಸ್ಫೂರ್ತಿ–2, ನಯನಾ–3.
ಬಾಲಕರ ವಿಭಾಗ: 200 ಮೀಟರ್ಸ್ ಐಎಂ: ವಿ.ಮನೀಷ್–1, ವಿಶ್ವನಾಥ್–2, ರತನ್‌ಗೌಡ–3. 50 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್: ರತನ್‌ಗೌಡ–1, ಮನೀಷ್–2, ಹುದಂತ್ ಸಿಂಗ್–3. 50 ಮೀಟರ್ಸ್ ಬ್ಯಾಕ್ ಸ್ಟ್ರೋಕ್: ಜಯಕೀರ್ತಿ ಶೆಟ್ಟಿ–1, ವಿಶ್ವನಾಥ್–2, ರಾಹುಲ್–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.