
ತಲಕಾಡು: ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ತಲಕಾಡು ಮಾಲಂಗಿ ಸೇತುವೆ ಕಾಮಗಾರಿ ಪುನರಾರಂಭವಾಗಿದೆ.
ಕಾಮಗಾರಿ ಎರಡು ವರ್ಷಗಳಿಂದ ಸ್ಥಗಿತಗೊಂಡಿರುವುದರಿಂದ ಹೋಬಳಿ ಜನರು ಬೇಸರ ವ್ಯಕ್ತಪಡಿಸಿದ್ದರು. ಕಾಮಗಾರಿ ಪುನಾರಾರಂಭಕ್ಕೆ ಕೆಆರ್‌ಡಿಸಿಎಲ್ ಅಧ್ಯಕ್ಷ ಎಚ್.ಸಿ. ಬಾಲಕೃಷ್ಣ ಅವರಿಗೆ ಮನವಿ ಮಾಡಲಾಗಿತ್ತು.
ಜುಲೈ 30ರಂದು ಕಾಮಗಾರಿ ನಡೆಯುವ ತಲಕಾಡಿನ ನಿಸರ್ಗಧಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪ್ರವಾಹ ಕಡಿಮೆಯಾದ ಬಳಿಕ ಕಾಮಗಾರಿ ಪುನಾರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಎರಡು ದಿನಗಳಿಂದ ಕಾವೇರಿ ನಿಸರ್ಗಧಾಮದಲ್ಲಿ ಸೇತುವೆ ಕೆಲಸ ಆರಂಭಗೊಂಡಿದ್ದು, ಸ್ಥಳೀಯರು ಸಂತಸಗೊಂಡಿದ್ದಾರೆ.
‘ಸೇತುವೆ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸದೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕಾರಣ ಹೇಳಿಕೊಂಡು ಅರ್ಧಕ್ಕೆ ನಿಲ್ಲಿಸಬಾರದು. ಸೇತುವೆ ಕಾಮಗಾರಿ ಪೂರ್ಣಗೊಂಡರೆ ಚಾಮರಾಜನಗರ, ಯಳಂದೂರು ಹಾಗೂ ಹೊರ ರಾಜ್ಯಗಳಾದ ತಮಿಳುನಾಡು, ಕೇರಳ ರಾಜ್ಯಗಳ ಸಂಪರ್ಕ ಸುಗಮವಾಗಲಿದೆ ಎಂದು ಗ್ರಾಮಸ್ಥರಾದ ರಮೇಶ್ ತುಡು, ನಾಗಣ್ಣ, ವೆಂಕಟರಮಣ ಗೌಡ, ಹೋಟೆಲ್ ರಾಜಪ್ಪ ಮತ್ತು ಸೋಮಣ್ಣ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.