
ಪ್ರಜಾವಾಣಿ ವಾರ್ತೆ
ಸರಗೂರು (ಮೈಸೂರು ಜಿಲ್ಲೆ): ತಾಲ್ಲೂಕಿನ ಮೊಳೆಯೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ಶುಕ್ರವಾರ ಹುಲಿ ದಾಳಿಯಿಂದ ತಾಲ್ಲೂಕಿನ ಕೂಡಿಗಿ ಗ್ರಾಮದ ರೈತ ದೊಡ್ಡನಿಂಗಯ್ಯ (65) ಮೃತಪಟ್ಟಿದ್ದಾರೆ. ಇದು ವಾರದ ಅಂತರದಲ್ಲಿ ನಡೆದಿರುವ 2ನೇ ಘಟನೆಯಾಗಿದೆ.
ಅರಣ್ಯದಂಚಿನ ಕುರ್ಣೇಗಾಲದ ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ರೈತನ ಮೇಲೆ ದಾಳಿ ನಡೆಸಿರುವ ಹುಲಿ, ದೇಹವನ್ನು ಎಳೆದುಕೊಂಡು ಆನೆ ಕಂದಕದಲ್ಲಿ ಬಿಟ್ಟಿದೆ. ಅವರ ಕೂಗು ಕೇಳಿ ಅಕ್ಕ, ಪಕ್ಕದ ಜಮೀನಿನಲ್ಲಿದ್ದ ರೈತರು ಓಡಿ ಹೋದರು.
ತಾಲ್ಲೂಕಿನಲ್ಲಿ ತಿಂಗಳಲ್ಲಿ ಹುಲಿ ದಾಳಿ ನಡೆಸಿದ ಮೂರನೇ ಪ್ರಕರಣ ಇದಾಗಿದೆ. ಈ ಘಟನೆಗಳಿಂದ ಈ ಭಾಗದ ಗ್ರಾಮಗಳ ಜನರಲ್ಲಿ ಭೀತಿ ಹೆಚ್ಚಾಗಿದೆ. ಹುಲಿಗಳನ್ನು ಸೆರೆ ಹಿಡಿಯಬೇಕು ಎಂದೂ ಆಗ್ರಹಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.