ADVERTISEMENT

ಹುಲಿ ಸೆರೆಹಿಡಿಯಲು ಶಬ್ದಗ್ರಹಣ ತಂತ್ರ ಬಳಕೆ

ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಕೆ.ಎಂ.ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 19:29 IST
Last Updated 16 ಅಕ್ಟೋಬರ್ 2018, 19:29 IST
ಕೆ.ಎಂ ನಾರಾಯಣಸ್ವಾಮಿ ಸೋಮವಾರ ಅಧಿಕಾರ ಸ್ವೀಕರಿಸಿದರು
ಕೆ.ಎಂ ನಾರಾಯಣಸ್ವಾಮಿ ಸೋಮವಾರ ಅಧಿಕಾರ ಸ್ವೀಕರಿಸಿದರು   

ಹುಣಸೂರು: ಕೆ.ಜಿ.ಹಬ್ಬನಕುಪ್ಪೆ ಗ್ರಾಮಕ್ಕೆ ಹೊಂದಿಕೊಂಡಿರುವ ತರಗನ್ ಎಸ್ಟೇಟ್‌ನಲ್ಲಿ ಅಡಗಿರುವ ಹುಲಿ ಮತ್ತು ಮೂರು ಮರಿಗಳನ್ನು ಸೆರೆಹಿಡಿಯಲು ಶಬ್ದಗ್ರಹಣ ತಂತ್ರವನ್ನು ಅನುಸರಿಸಲಾಗುತ್ತದೆ ಎಂದು ಹುಲಿ ಯೋಜನೆ ನಿರ್ದೇಶಕ ಕೆ.ಎಂ.ನಾರಾಯಣಸ್ವಾಮಿ ತಿಳಿಸಿದರು.

ನಾಗರಹೊಳೆ ಹುಲಿ ಯೋಜನಾ ನಿರ್ದೇಶಕರಾಗಿ ಸೋಮವಾರ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ತರಗನ್‌ ಎಸ್ಟೇಟ್‌ನಲ್ಲಿ ಅಡಗಿರುವ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಪ್ರಯತ್ನ ನಡೆಸಿದೆ. ಆನೆ ಬಳಸಿ ಕೂಂಬಿಂಗ್ ಕಾರ್ಯಾಚರಣೆಜೊತೆಗೆ ಡ್ರೋನ್‌ ಕ್ಯಾಮೆರಾ ಮೂಲಕ ಹುಲಿ ಸೆರೆಗೆ ಪ್ರಯತ್ನಿಸಲಾಗಿತ್ತು. ಆದರೆ, ಅಲ್ಲಿ ಕುರುಚಲು ಪೊದೆ ಇದ್ದ ಕಾರಣ ಹುಲಿ ಅಡಗಿರುವ ಸ್ಥಳ ಪತ್ತೆಯಾಗಿಲ್ಲ ಎಂದು ಹೇಳಿದರು.

ADVERTISEMENT

ಇಲಾಖೆ ಸಿಬ್ಬಂದಿ ಎಸ್ಟೇಟ್‌ ಒಳಗಿನ ಮನೆಯಲ್ಲಿ ಅಡಗಿ, ರಾತ್ರಿ ಸಮಯದಲ್ಲಿ ಹುಲಿ ಮಾಡುವ ಶಬ್ದವನ್ನು ಗ್ರಹಿಸಲಿದ್ದಾರೆ. ಇದರ ಜೊತೆಗೆ ಕ್ಯಾಮೆರ ಟ್ರ್ಯಾಪಿಂಗ್‌ ಮೂಲಕ ಹುಲಿ ಸೆರೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಪರಿಹಾರ: ನಾಗರಹೊಳೆ ಅರಣ್ಯದಿಂದ ಬೀಮನಹಳ್ಳಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದ 170 ಕುಟುಂಬಗಳಿಗೆ ಶೀಘ್ರದಲ್ಲೇ ಪರಿಹಾರ ಹಣ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಅರಣ್ಯ ಸಂರಕ್ಷಣಾಧಿಕಾರಿ ವಿಜಯ ಕುಮಾರ್‌, ನಾಗರಹೊಳೆ ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿಗಳಾದ ಪ್ರಸನ್ನ ಕುಮಾರ್‌, ಪಾಲ್ ಆಂಥೋಣಿ, ಆರ್‌.ಎಫ್‌.ಒ. ಶಿವರಾಂ. ಮಧುಸೂದನ್‌, ಗಾನಶ್ರೀ, ಸುರೇಂದ್ರ, ಪ್ರಭುಲಿಂಗಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.