ಕಾರು ಡಿಕ್ಕಿಯಾಗಿ ಹುಲಿ ಮೃತಪಟ್ಟಿರುವ ದೃಶ್ಯ
ಮೈಸೂರು: ತಾಲ್ಲೂಕಿನ ಮಂಡಕಳ್ಳಿ ವಿಮಾನನಿಲ್ದಾಣದ ಬಳಿ ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ಕಾರು ಡಿಕ್ಕಿಯಾಗಿ ಹುಲಿ ಸಾವಿಗೀಡಾಗಿದೆ.
ರಸ್ತೆ ದಾಟುತ್ತಿದ್ದ ವೇಳೆ ಸುಮಾರು ಒಂದೂವರೆ ವರ್ಷದ ಹುಲಿಗೆ ಕಾರು ಡಿಕ್ಕಿಯಾಗಿದೆ. ಮೃತ ಪಟ್ಟ ಹುಲಿಯ ತಲೆಯ ಭಾಗಕ್ಕೆ ಗಾಯಗಳಾಗಿರುವುದು ಕಂಡು ಬಂದಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗವೂ ಜಖಂಗೊಂಡಿದೆ.
ಜಖಂಗೊಂಡಿರುವ ಕಾರಿನ ದೃಶ್ಯ
ಚಾಲಕ ಹಾಗೂ ಕಾರು ವಶಕ್ಕೆ ಪಡೆಯಲಾಗಿದೆ. ಕಳೇಬರವನ್ನು ಸ್ಥಳದಿಂದ ಸಾಗಿಸಲಾಗಿದೆ ಎಂದುಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.