ADVERTISEMENT

ಕಾಮಗಾರಿ: ರೈಲುಗಳ ಸಂಚಾರ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 17 ಮೇ 2019, 20:44 IST
Last Updated 17 ಮೇ 2019, 20:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ನೈರುತ್ಯ ರೈಲ್ವೆ ಮೈಸೂರು ವಿಭಾಗ ವ್ಯಾಪ್ತಿಯ ತುಮಕೂರು – ಮಲ್ಲಸಂದ್ರ, ಗುಬ್ಬಿ ಹಾಗೂ ತುಮಕೂರು ಅರಸೀಕೆರೆ ನಡುವೆ ರೈಲ್ವೆ ಜೋಡಿ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿರುವ ಕಾರಣ, ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಕೆಎಸ್‌ಆರ್‌ ಬೆಂಗಳೂರು– ಶಿವಮೊಗ್ಗ ಟೌನ್‌ ಪ್ಯಾಸೆಂಜರ್ ರೈಲು (56227) ಮೇ 22ರಿಂದ 28ರವರೆಗೆ ಹಾಗೂ ಶಿವಮೊಗ್ಗ ಟೌನ್‌– ಕೆಎಸ್ಆರ್‌ ಪ್ಯಾಸೆಂಜರ್‌ ರೈಲು (56228) ರೈಲು ಮೇ 23ರಿಂದ 29ರವರೆಗೆ, ಹರಿಹರ – ಯಶವಂತಪುರ ಎಕ್ಸ್‌ಪ್ರೆಸ್ (16577) ಮೇ 23, 24 ಮತ್ತು 29ರಂದು ಹಾಗೂ ಯಶವಂತಪುರ – ಹರಿಹರ ಎಕ್ಸ್‌ಪ್ರೆಸ್‌ (16578) ಮೇ 22, 23, 28ರಂದು, ಕೆಆರ್‌ಆರ್‌ ಬೆಂಗಳೂರು – ತಾಳಗುಪ್ಪ ಎಕ್ಸ್‌ಪ್ರೆಸ್‌ (20651) ಮೇ 22ರಿಂದ 28ರವರೆಗೆ, ತಾಳಗುಪ್ಪ – ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ (20652) ಮೇ 23, 29ರಂದು, ಯಶವಂತಪುರ – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (16579) ಹಾಗೂ ಶಿವಮೊಗ್ಗ ಟೌನ್ – ಯಶವಂಶಪುರ ಎಕ್ಸ್‌ಪ್ರೆಸ್‌ (16580) ಮೇ 25, 26, 27ರಂದು, ಕೆಎಸ್ಆರ್‌ ಬೆಂಗಳೂರು, ಚಿಕ್ಕಜಾಜೂರು – ಚಿತ್ರದುರ್ಗ ಪ್ಯಾಸೆಂಜರ್ (56519), ಚಿತ್ರದುರ್ಗ– ಹರಿಹರ ಪ್ಯಾಸೆಂಜರ್ (56517) ಸಂಚಾರ ಮೇ 23ರಿಂದ 29ರವರೆಗೆ ಸಂಪೂರ್ಣ ರದ್ದಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಚಿಕ್ಕಮಗಳೂರು– ಕೆಎಸ್‌ಆರ್‌ ಬೆಂಗಳೂರು ಪ್ಯಾಸೆಂಜರ್ (56277) ಮತ್ತು ಕೆಎಸ್‌ಆರ್ ಬೆಂಗಳೂರು – ಚಿಕ್ಕಮಗಳೂರು ಪ್ಯಾಸೆಂಜರ್ (56278) ಮೇ 23ರಿಂದ 29ವರೆಗೆ ಸಂಚಾರ ಭಾಗಶಃ ರದ್ದಾಗಲಿದೆ.

ADVERTISEMENT

ತಡೆಹಿಡಿಯುವ ರೈಲುಗಳು: ಹುಬ್ಬಳ್ಳಿ – ಅಶೋಕಪುರಂ ಎಕ್ಸ್‌ಪ್ರೆಸ್ (17325) ರೈಲನ್ನು ಮೇ 22, 27ರಂದು 55 ನಿಮಿಷ, ಕೆಎಸ್‌ಆರ್‌ ಬೆಂಗಳೂರು – ಧಾರವಾಡ ಎಕ್ಸ್‌‍‍ಪ್ರೆಸ್‌ (12725) ರೈಲನ್ನು ಮೇ 27ರಂದು 1 ಗಂಟೆ ತಡೆಹಿಡಿಯಲಾಗುವುದು.

ಮಾರ್ಗ ಬದಲು: ಮೈಸೂರು – ವಾರಾಣಸಿ ಎಕ್ಸ್‌ಪ್ರೆಸ್ (16229) ಮೇ 23, 28ರಂದು ಯಶವಂತಪುರ, ನೆಲಮಂಗಲ, ಹಾಸನ ಮಾರ್ಗದಲ್ಲಿ, ಹುಬ್ಬಳ್ಳಿ – ಅಶೋಕಪುರಂ (17326) ಎಕ್ಸ್‌ಪ್ರೆಸ್ ಮೇ 23ರಿಂದ 29ರಂದು ಯಶವಂತಪುರ, ಹಾಸನ, ಅರಸೀಕೆರೆ ಮಾರ್ಗದಲ್ಲಿ, ಉದಯಪುರ– ಮೈಸೂರು ಎಕ್ಸ್‌ಪ್ರೆಸ್ (19667) ಮೇ 27ರಂದು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗದಲ್ಲಿ, ಧಾರವಾಡ– ಕೆಎಸ್ಆರ್‌ ಬೆಂಗಳೂರು ಎಕ್ಸ್‌ಪ್ರೆಸ್ (12726) ಮೇ 28, 29ರಂದು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗದಲ್ಲಿ ಸಂಚರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.