ಮೈಸೂರು: ಮಹಾರಾಜ ಕಾಲೇಜು– ಒಂದು ಚಾರಿತ್ರಿಕ ಬೆಳವಣಿಗೆ (1833–1956) ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸಿ ಮಾಹಿತಿಯನ್ನು ಗ್ರಂಥ ರೂಪದಲ್ಲಿ ಪ್ರಕಟಿಸಲು ಮೈಸೂರು ವಿಶ್ವವಿದ್ಯಾಲಯವು ಬೆಂಗಳೂರಿನ ದಿ ಮಿಥಿಕ್ ಸೊಸೈಟಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾದ ರೋಹಿತ ಈಶ್ವರ, ಪವಮಾನ ಹಾಗೂ ಗ್ಯಾವಿನ್ ಜೂಡ್ ವಿಲ್ಸನ್ ಸಂಶೋಧನೆಯಲ್ಲಿ ತೊಡಗಿದ್ದಾರೆ. ಇವರೊಂದಿಗೆ ಇತಿಹಾಸಕಾರ ನರೇಂದ್ರ ಪ್ರಸಾದ್ ಇರಲಿದ್ದಾರೆ. ಪತ್ರಾಗಾರ ಹಾಗೂ ಇತರ ಗ್ರಂಥಾಲಯಗಳಲ್ಲಿ ಲಭ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಸಂಗ್ರಹಿಸಿ ಗ್ರಂಥ ರಚಿಸಲಾಗುವುದು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹಾಗೂ ಕುಲಸಚಿವೆ ಎಂ.ಕೆ. ಸವಿತಾ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಯಿತು. ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ಎಸ್. ರವಿ ಒಡಂಬಡಿಕೆಗೆ ಸಹಿ ಹಾಕಿದರು. ಪರೀಕ್ಷಾಂಗ ಕುಲಸಚಿವ ಎನ್.ನಾಗರಾಜು ಹಾಗೂ ಹಣಕಾಸು ಅಧಿಕಾರಿ ರೇಖಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.