ADVERTISEMENT

ಮೈಸೂರು: ತೆರೆಯದ ಕಾಂಗ್ರೆಸ್‌ ಕಚೇರಿ ಬಾಗಿಲು

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 14:20 IST
Last Updated 4 ಜೂನ್ 2024, 14:20 IST
ಮೈಸೂರಿನ ಕಾಂಗ್ರೆಸ್‌ ಭವನದ ಗೇಟ್‌ ಮುಚ್ಚಿರುವುದು
ಮೈಸೂರಿನ ಕಾಂಗ್ರೆಸ್‌ ಭವನದ ಗೇಟ್‌ ಮುಚ್ಚಿರುವುದು   

ಮೈಸೂರು: ಚುನಾವಣಾ ಸಿದ್ಧತೆ, ವಿವಿಧ ಸಮಿತಿಗಳ ಸಭೆಗಾಗಿ ಆಗಮಿಸುವ ಕಾರ್ಯಕರ್ತರಿಂದ ತುಂಬಿರುತ್ತಿದ್ದ ಕಾಂಗ್ರೆಸ್‌ ಭವನವು ಮಂಗಳವಾರ ಭಣಗುಡುತ್ತಿತ್ತು. ಬೆಳಿಗ್ಗೆಯಿಂದಲೇ ಗೇಟ್ ಮುಚ್ಚಿದ್ದು ಪದಾಧಿಕಾರಿಗಳು, ಕಾರ್ಯಕರ್ತರು ಅತ್ತ ಸುಳಿಯಲಿಲ್ಲ.

ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ ಅವರು ಸೋಮವಾರ ರಾತ್ರಿ ಮತ ಎಣಿಕೆ ಕೇಂದ್ರಕ್ಕೆ ತೆರಳಿ ಸಿಸಿಟಿವಿ ಕ್ಯಾಮೆರಾ ಮೂಲಕ ಸ್ಟ್ರಾಂಗ್‌ ರೂಂ ವೀಕ್ಷಿಸಿದ್ದರು. ಮಂಗಳವಾರ ಬೆಳಿಗ್ಗೆಯೂ ಬೆಂಬಲಿಗರೊಂದಿಗೆ ತೆರಳಿದ್ದರು. ಆರಂಭಿಕ ಹಂತದಿಂದಲೇ ಪಕ್ಷವು ಹಿನ್ನಡೆ ಅನುಭವಿಸಿದ ಕಾರಣ ಪಕ್ಷದ ಕಚೇರಿ ಬಳಿಗೆ ಕಾರ್ಯಕರ್ತರು ಯಾರೂ ಬರಲಿಲ್ಲ.

ಕಚೇರಿ ಆವರಣದಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪಕ್ಕದ ಜಿಲ್ಲೆಯಾದ ಚಾಮರಾಜನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌ ಅವರ ಗೆಲುವನ್ನು ಸಂಭ್ರಮಿಸಲು ಅಲ್ಲಿಗೆ ತೆರಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.