ADVERTISEMENT

ಗುಂಡ್ಲುಪೇಟೆ: ಕಾಡಾನೆ ದಾಳಿಗೆ ಫಸಲು ನಾಶ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 13:40 IST
Last Updated 18 ಜೂನ್ 2025, 13:40 IST
ಗುಂಡ್ಲುಪೇಟೆಯ ಮಂಚಹಳ್ಳಿಯಲ್ಲಿ ಕಾಡಾನೆಯು ಜೋಳದ ಫಸಲು ನಾಶಪಡಿಸಿರುವುದು
ಗುಂಡ್ಲುಪೇಟೆಯ ಮಂಚಹಳ್ಳಿಯಲ್ಲಿ ಕಾಡಾನೆಯು ಜೋಳದ ಫಸಲು ನಾಶಪಡಿಸಿರುವುದು   

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರದ ಓಂಕಾರ ವಲಯ ವ್ಯಾಪ್ತಿಯ ಮಂಚಹಳ್ಳಿ ಗ್ರಾಮದಲ್ಲಿ ಮಂಗಳವಾರ ಕಾಡಾನೆಯು ದಾಳಿ ನಡೆಸಿ ಟೊಮೊಟೊ, ಜೋಳದ ಫಸಲು ಹಾಗೂ ತೆಂಗಿನ ಸಸಿ ನಾಶ ನಾಶಪಡಿಸಿದೆ.

ಗ್ರಾಮದ ಮಹದೇವೇಗೌಡ ಎಂಬುವವರಿಗೆ ಸೇರಿದ ಸರ್ವೇ ನಂ–138ರ ಜಮೀನಿಗೆ ಕಾಡಾನೆ ಲಗ್ಗೆಯಿಟ್ಟು ಮುಕ್ಕಾಲು ಎಕರೆ ಟೊಮೊಟೊ, ಜೋಳ ಹಾಗೂ 6 ತೆಂಗಿನ ಸಸಿ ತುಳಿದು ಹಾಳುಗೆಡವಿದೆ.

ಪರಿಹಾರಕ್ಕೆ ಒತ್ತಾಯ:

ADVERTISEMENT

ಓಂಕಾರ ವಲಯ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದ್ದು, ನಿರಂತರವಾಗಿ ದಾಳಿ ನಡೆಸಿ ಫಸಲು ನಾಶ ಪಡಿಸುತ್ತಿವೆ. ಅರಣ್ಯಾಧಿಕಾರಿಗಳು ಕ್ರಮ ವಹಿಸಲು ವಿಫಲರಾಗಿದ್ದಾರೆ. ಇದರಿಂದ ರೈತರಿಗೆ ಅಪಾರ ನಷ್ಟವಾಗುತ್ತಿದ್ದು, ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಬಸವಣ್ಣ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.